ಕನ್ನಡ ಸಿನಿಮಾ ಲೋಕ ಬದಲಾಗಿದೆ. ಬದಲಾವಣೆಗೆ ತಕ್ಕಂತ ಸಿನಿಮಾಗಳು ಕೂಡ ಪ್ರೇಕ್ಷಕರ ಮಡಿಲು ಸೇರ್ತಿವೆ. ಅದರ ಮುಂದುವರಿದ ಭಾಗವೆಂಬಂತೆ ಈಗ ಮತ್ತೊಂದು ಕಂಟೆಂಟ್ ಹಾಗೂ ಕ್ವಾಲಿಟಿ ಸಿನಿಮಾ ಚಿತ್ರರಸಿಕರನ್ನು ರಂಜಿಸಲು ಬರ್ತಿದೆ. ಅದೇ ವಿಂಡೋಸೀಟ್. ಆರಂಭದಿಂದಲೂ ಟೈಟಲ್, ಟೀಸರ್, ಹಾಡಿನ ಮೂಲಕ ಹೊಸ ಲೋಕ ಸೃಷ್ಟಿಸಿದ್ದ ವಿಂಡೋಸೀಟ್ ಸಿನಿಮಾದ ಮೊದಲ ನೋಟ ಅಂದ್ರೆ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಜೂನ್ 6ರಂದು ನಿಮಾದ ಟ್ರೈಲರ್ ಅನಾವರಣವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ, ಟ್ರೈಲರ್ ಪ್ರೋಮೋ ಝಲಕ್ ವೊಂದನ್ನು ರಿಲೀಸ್ ಮಾಡಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
Advertisement
ಪ್ರತಿಯೊಬ್ಬರಿಗೂ ಒಂದೊಂದು ಜರ್ನಿ ಇರುತ್ತದೆ. ಅದ್ರಲ್ಲೂ ವಿಂಡೋಸೀಟ್ ನಲ್ಲಿ ಕುಳಿತು ಜರ್ನಿ ಮಾಡುವ ಅನುಭವದ ಕಥೆಯನ್ನು ಟ್ರೈಲರ್ ಪ್ರೋಮೋದಲ್ಲಿ ಕಟ್ಟಿಕೊಡಲಾಗಿದೆ. ಬರೀ ಪಯಣದ ಅನುಭವದ ಕಥೆ ಮಾತ್ರವಲ್ಲ ಪ್ರೀತಿ, ಜಗಳ, ಕೋಪ ನ್ಯಾಯಕ್ಕಾಗಿ ಹೋರಾಡಿದ ಕಥೆಯನ್ನು ಹೇಳಲು ಹೊರಟಿರುವ ನಾಯಕ ರಘುವಿನ ಝಲಕುಗಳನ್ನು ಹೊತ್ತ ಟ್ರೈಲರ್ ಜೂನ್ 6ಕ್ಕೆ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ದಾಖಲೆ: 21 ಸಿಟಿಗಳಲ್ಲಿ ಚಾರ್ಲಿ-777 ಪ್ರೀಮಿಯರ್
Advertisement
Advertisement
ನಾಯಕಿ ಹಾಗೂ ನಿರೂಪಕಿಯಾಗಿ ಗಮನಸೆಳೆದಿರುವ ಶೀತಲ್ ಶೆಟ್ಟಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ವಿಂಡೋಸೀಟ್ ಸಿನಿಮಾದಲ್ಲಿ ನಿರೂಪ್ ಭಂಡಾರಿ ನಾಯಕನಾಗಿ ಮಿಂಚಿದ್ದು, ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗರ್ ನಾಯಕಿಯಾರಾಗಿ ಕಾಣಿಸಿಕೊಂಡಿದ್ದು, ರವಿಶಂಕರ್, ಮಧುಸೂದನ್ ರಾವ್, ಲೇಖ, ಸೂರಜ್ ಸೇರಿದಂತೆ ಇನ್ನಿತರ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಜಾಕ್ ಮಂಜು ಬಂಡವಾಳ ಹಾಕಿರುವ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೆಶ್ ರಾಜ್ ಛಾಯಾಗ್ರಹಣವಿದ್ದು, ಋತಿಕ್ ಸಂಕಲನ ನೀಡಿದ್ದಾರೆ. ಇದೇ ಜೂನ್ 6ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪದ ರಘು ಹೊಸ ಪಯಣದ ಹಾದಿ ತೆರೆದುಕೊಳ್ಳಲಿದೆ.