ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್ ತಟ್ಟಿದೆ. 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಡಲ್‌ವುಡ್ (Sandalwood) ನಿರ್ದೇಶಕ ಗಜೇಂದ್ರ (Gajendra) ಅಲಿಯಾಸ್ ಗಜ ಎಂಬಾತನನ್ನ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್- ಡಿಸೆಂಬರ್‌ನಲ್ಲೂ ‘ಪುಷ್ಪ 2’ ರಿಲೀಸ್ ಆಗೋದು ಡೌಟ್
ಏನಿದು ಕೇಸ್?
2004ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ರೌಡಿ ಶೀಟರ್ ಕೊತ್ತರವಿ ಕೊಲೆಯಾಗಿತ್ತು. ಈ ಕೇಸ್‌ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ನಿರ್ದೇಶಕ ಗಜೇಂದ್ರ 8ನೇ ಆರೋಪಿಯಾಗಿದ್ದ. ಕೊಲೆ ಕೇಸ್‌ನಲ್ಲಿ ಬಂಧಿತನಾಗಿದ್ದ ಗಜೇಂದ್ರಗೆ ಕೋರ್ಟ್ 1 ವರ್ಷ ಶಿಕ್ಷೆ ಕೂಡ ವಿಧಿಸಿತ್ತು. ಒಂದು ವರ್ಷ ಜೈಲುವಾಸ ಅನುಭವಿಸಿದ್ದ ಗಜೇಂದ್ರ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಜಾಮೀನು ಸಿಕ್ಕ ಬಳಿಕ 20 ವರ್ಷಗಳಿಂದ ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದ. ಬುಧವಾರ ಆತನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Advertisement
ರೌಡಿಶೀಟರ್ ಅರಸಯ್ಯನ ಶಿಷ್ಯನಾಗಿದ್ದ ಗಜೇಂದ್ರ, ಈ ಹಿಂದೆ ‘ಪುಟಾಣಿ ಪವರ್’ ಹಾಗೂ ‘ರುದ್ರ’ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅಷ್ಟೇ ಅಲ್ಲದೇ ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಹೇಳಿಕೊಂಡಿದ್ದಾನೆ.