Bengaluru City
ಸ್ಯಾಂಡಲ್‍ವುಡ್ ನಿರ್ದೇಶಕನಿಂದ ಹಿರಿಯ ನಟಿಗೆ ದೋಖಾ!

ಬೆಂಗಳೂರು: ಕಿರುತೆರೆಯ ಹಿರಿಯ ನಟಿ ಮಂಜುಳಮ್ಮ ಅವರಿಗೆ ನಿರ್ದೇಶಕ ನವೀನ್ ರೈ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅವಕಾಶಗಳನ್ನು ಕೊಡಿಸುವದಾಗಿ ಹೇಳಿ ನವೀನ್ ರೈ ಲಕ್ಷಾಂತರ ರೂಪಾಯಿಯನ್ನ ಪಡೆದುಕೊಂಡಿದ್ದರು. ಆದರೆ ನವೀನ್ ರೈ ಯಾವುದೇ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶಗಳನ್ನ ಕೊಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜುಳಮ್ಮ ತಾವು ನೀಡಿದ ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಕೆಲ ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಂಜುಳಮ್ಮ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಲ್ಲಿನ ವೀಣೆ ಧಾರಾವಾಹಿ ಶೂಟಿಂಗ್ ವೇಳೆ ಮಂಜುಳಮ್ಮ ಅವರಿಗೆ ನವೀನ್ ರೈ ಪರಿಚಯ ಮಾಡಿಕೊಂಡಿದ್ದನು. ಚಂದನವನದಲ್ಲಿ ತನಗೆ ಎಲ್ಲರೂ ಪರಿಚಯ ಸ್ಟಾರ್ ನಟರ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಒಡವೆ ಹಾಗು 15 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ ಎಂದು ಮಂಜುಳಮ್ಮ ಆರೋಪಿಸುತ್ತಿದ್ದಾರೆ.
