ಬೆಂಗಳೂರು: 2000 ರೂ. ಮುಖಬೆಲೆಯ ನೋಟುಗಳ ಖೋಟಾನೋಟು ದಂಧೆ ನಡೆಸುತ್ತಿದ್ದ ಸಹನಟಿ ಜಯಮ್ಮ ಹಾಗು ಆಕೆಯ ಸಹಾಯಕ ಎನ್ನಲಾದ ಆಟೋ ಡ್ರೈವರ್ ಗೋವಿಂದರಾಜುನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ನಿರ್ಮಾಪಕರು, ಕೆಲವು ನಟ- ನಟಿಯರೇ ಖೋಟಾನೋಟು ಕೊಟ್ಟು ಚಲಾವಣೆ ಮಾಡ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜಯಮ್ಮಳ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಯಮ್ಮ ಫೋನ್‍ನಲ್ಲಿದ್ದ ನಂಬರ್‍ಗಳನ್ನ ಹಿಡಿದು ಜಾಲಾಡುತ್ತಿದ್ದಾರೆ.
Advertisement
Advertisement
ಸಿಕ್ಕಿಬಿದ್ದಿದ್ದು ಹೇಗೆ?: ನೆಲಮಂಗಲದ ದಾಬಸ್‍ಪೇಟೆ ಬಳಿ ಖೋಟಾನೋಟು ಚಲಾಯಿಸುತ್ತಿದ್ದಾಗ ಅನುಮಾನ ಬಂದ ಅಂಗಡಿಯವರು ಈಕೆಯನ್ನ ಪ್ರಶ್ನೆ ಮಾಡಿದ್ರು. ಆದ್ರೆ ಈ ಜಯಮ್ಮ ಅಲ್ಲಿಂದ ಕಾಲ್ಕಿತ್ತಳು. ಕೊನೆಗೆ ಜನ ಈಕೆಯ ಬೆನ್ನತ್ತಿ ಹಿಡಿದಾಗ 2 ಸಾವಿರ ರೂ. ಮುಖಬೆಲೆಯ 24 ಖೋಟಾನೋಟುಗಳು ಸಿಕ್ಕಿದೆ. ತಕ್ಷಣ ಸರ್ವಜನಿಕರು ದಾಬಸ್‍ಪೇಟೆ ಪೊಲೀಸರನ್ನ ಕರೆಸಿ ಈಕೆಯನ್ನ ಅವರ ವಶಕ್ಕೆ ನೀಡಿದ್ದಾರೆ. ಈ ಕೃತ್ಯದ ವಿಡಿಯೋವನ್ನ ಅಲ್ಲಿನ ಸಾರ್ವಜನಿಕರು ಪಬ್ಲಿಕ್ ಟಿವಿಗೆ ವಾಟ್ಸಪ್ ಮೂಲಕ ರವಾನಿಸಿದ್ದರು.
Advertisement
ಈಕೆ ಖೋಟಾನೋಟು ಚಲಾವಣೆಯಲ್ಲಿದ್ದಾಗಲೇ ರೆಡ್‍ಹ್ಯಾಂಡಾಗಿ ಬುಧವಾರದಂದು ಸಿಕ್ಕಿಬಿದ್ದಿದ್ದಾಳೆ. ಕೊನೆಗೆ ತಪ್ಪಾಯ್ತು, ಕಾಲಿಡ್ಕೋತೀನಿ, ನಿಮ್ಮಕ್ಕ ಅಂತಾ ತಿಳ್ಕೊಳಿ ಅಂತ ಗೋಗರೆದಿದ್ದಾಳೆ. ಪೊಲೀಸರಿಗೆ ಹೇಳ್ಬೇಡಿ ಅಂತ ಜನರನ್ನ ಯಾಮಾರಿಸೋ ಯತ್ನ ಮಾಡಿದ್ದಾಳೆ.
https://www.youtube.com/watch?v=uscmCy4cZN0