Connect with us

Bengaluru City

ಸ್ಯಾಂಡಲ್‍ವುಡ್ ಸಹನಟಿಯಿಂದ ಖೋಟಾನೋಟು ದಂಧೆ – ಪಬ್ಲಿಕ್ ಟಿವಿಯಲ್ಲಿ ಇಂಚಿಂಚು ದೃಶ್ಯ

Published

on

ಬೆಂಗಳೂರು: ಇದು ಇಡೀ ದೇಶವೇ ಬೆಚ್ಚಿ ಬೀಳಿಸೋ ಸ್ಟೋರಿ. ಕಾಳಧನಬನ್ನು ಮಟ್ಟಹಾಕಲು ದೇಶದ ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ, ಹೊಸ 2 ಸಾವಿರ ರೂ. ಮುಖಬೆಲೆಯ ನೋಟಯಗಳನ್ನ ಪರಿಚಯಿಸಿದ್ರು. ಆದ್ರೆ ಹಳೇ 500, 1000 ರೂ. ನೋಟು ನಿಷೇಧದ ಬಳಿಕ 2 ಸಾವಿರ ರೂ. ಮುಖಬೆಲೆಯ ಖೋಟಾನೋಟಿನ ದಂಧೆ ನಡೆಯುತ್ತಿದ್ದು, 2000 ರೂ. ನಕಲಿ ನೋಟು ಚಲಾಯಿಸುತ್ತಿದ್ದಾಗ ಸ್ಯಾಂಡಲ್‍ವುಡ್‍ನ ಸಹನಟಿ ಜಯಮ್ಮ ಸಿಕ್ಕಿಬಿದ್ದಿದ್ದಾಳೆ.

ಸಾರ್ವಜನಿಕರೇ ಖೋಟಾನೋಟು ಸಮೇತ ಜಯಮ್ಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಸಹನಟಿ ಜಯಮ್ಮ (45) ಹಾಗೂ ಆಟೋ ಡೈವರ್ ಗೋವಿಂದರಾಜು ಈಗ ಪೊಲೀಸರ ವಶದಲ್ಲಿದ್ದಾರೆ.

ನಿರ್ಮಾಪಕರು, ಕೆಲವು ನಟ- ನಟಿಯರೇ ಖೋಟಾನೋಟು ಕೊಟ್ಟು ಚಲಾವಣೆ ಮಾಡ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜಯಮ್ಮಳ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಯಮ್ಮ ಫೋನ್‍ನಲ್ಲಿದ್ದ ನಂಬರ್‍ಗಳನ್ನ ಹಿಡಿದು ಜಾಲಾಡುತ್ತಿದ್ದಾರೆ.

ಸ್ಯಾಂಡಲ್‍ವುಡ್‍ನ ಹೆಸರಾಂತ ನಟ ನಟಿಯರೊಡನೆ ಜಯಮ್ಮ ಅಭಿನಯಿಸಿದ್ದಾಳೆ. ಸುದೀಪ್, ಉಪೇಂದ್ರ, ಸಾಧುಕೋಕಿಲ ಸೇರಿದಂತೆ ಹಲವರ ಚಿತ್ರಗಳಲ್ಲಿ ಜಯಮ್ಮ ಕಾಣಿಸಿಕೊಂಡಿದ್ದಾಳೆ ಎನ್ನಲಾಗಿದೆ. ಅಷ್ಟಕ್ಕೂ ಈ ಜಯಮ್ಮ ಯಾರು? ಎಲ್ಲಿಯವಳು ಅನ್ನೋದಕ್ಕಿಂತಾ ಈಕೆ ಹೇಳ್ತಿರೋದೆಲ್ಲಾ ನಿಜನಾ ಸುಳ್ಳಾ ಅನ್ನೋದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ.

ಈಕೆ ಖೋಟಾನೋಟು ಚಲಾವಣೆಯಲ್ಲಿದ್ದಾಗಲೇ ರೆಡ್‍ಹ್ಯಾಂಡಾಗಿ ಬುಧವಾರದಂದು ಸಿಕ್ಕಿಬಿದ್ದಿದ್ದಾಳೆ. ಕೊನೆಗೆ ತಪ್ಪಾಯ್ತು, ಕಾಲಿಡ್ಕೋತೀನಿ, ನಿಮ್ಮಕ್ಕ ಅಂತಾ ತಿಳ್ಕೊಳಿ ಅಂತ ಗೋಗರೆದಿದ್ದಾಳೆ. ಪೊಲೀಸರಿಗೆ ಹೇಳ್ಬೇಡಿ ಅಂತ ಜನರನ್ನ ಯಾಮಾರಿಸೋ ಯತ್ನ ಮಾಡಿದ್ದಾಳೆ.

ಸಿಕ್ಕಿಬಿದ್ದಿದ್ದು ಹೇಗೆ?: ನೆಲಮಂಗಲದ ದಾಬಸ್‍ಪೇಟೆ ಬಳಿ ಖೋಟಾನೋಟು ಚಲಾಯಿಸುತ್ತಿದ್ದಾಗ ಅನುಮಾನ ಬಂದ ಅಂಗಡಿಯವರು ಈಕೆಯನ್ನ ಪ್ರಶ್ನೆ ಮಾಡಿದ್ರು. ಆದ್ರೆ ಈ ಜಯಮ್ಮ ಅಲ್ಲಿಂದ ಕಾಲ್ಕಿತ್ತಳು. ಕೊನೆಗೆ ಜನ ಈಕೆಯ ಬೆನ್ನತ್ತಿ ಹಿಡಿದಾಗ 2 ಸಾವಿರ ರೂ. ಮುಖಬೆಲೆಯ 24 ಖೋಟಾನೋಟುಗಳು ಸಿಕ್ಕಿದೆ. ತಕ್ಷಣ ಸರ್ವಜನಿಕರು ದಾಬಸ್‍ಪೇಟೆ ಪೊಲೀಸರನ್ನ ಕರೆಸಿ ಈಕೆಯನ್ನ ಅವರ ವಶಕ್ಕೆ ನೀಡಿದ್ದಾರೆ. ಈ ಘಟನೆಯ ವಿಡಿಯೋವನ್ನ ಅಲ್ಲಿನ ಸಾರ್ವಜನಿಕರು ಪಬ್ಲಿಕ್ ಟಿವಿಗೆ ವಾಟ್ಸಪ್ ಮೂಲಕ ರವಾನಿಸಿದ್ದಾರೆ.

https://www.youtube.com/watch?v=uscmCy4cZN0&feature=youtu.be

 

Click to comment

Leave a Reply

Your email address will not be published. Required fields are marked *