ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೇ ಜೊತೆಗೆ ಸರಳತೆಯಿಂದ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ. ಪತಿ ರಾಕಿಂಗ್ ಸ್ಟಾರ್ ಯಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾದಲ್ಲಿ ಅಷ್ಟು ಕಾಣಿಸಿಕೊಳ್ಳದಿಂದ್ರೂ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಯಾವಾಗಲೂ ಕನೆಕ್ಟ್ ಆಗಿರುತ್ತಾರೆ. ಮದುವೆಯಾದ ನಂತರ ಇಬ್ಬರು ಸ್ಟಾರ್ ಕಪಲ್‍ಗಳು ಸಿನಿಮಾ ಜೊತೆಗೆ ಜನಸಾಮಾನ್ಯರಿಗೆ ಸಹಾಯವಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅದೇ ರೀತಿ ಇಂದು ಸಹ ರಾಧಿಕಾ ಎದೆಹಾಲನ್ನು ದಾನ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಎದೆಹಾಲು ದಾನ ಮಾಡಿ ಎಂದು ಸಂದೇಶ ಕೊಟ್ಟಿದ್ದಾರೆ.
ಎದೆಹಾಲು ಮಕ್ಕಳಿಗೆ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದನ್ನು ಕುರಿತು ರಾಧಿಕಾ ವೀಡಿಯೋ ಮಾಡಿದ್ದು, ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋವನ್ನು ವೈದ್ಯರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್
ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ
ಈ ವೀಡಿಯೋದಲ್ಲಿ ರಾಧಿಕಾ, ಜೀವನ ಅತ್ಯಮೂಲ್ಯ ಉಡುಗೊರೆಗಳಲ್ಲಿ ಎದೆಹಾಲು ಕೂಡ ಒಂದು. ಎದೆಹಾಲಿನಲ್ಲಿ ಇರುವ ಅಂಶಗಳನ್ನು ಮತ್ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಆಗಷ್ಟೇ ಹುಟ್ಟಿರುವ ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ. ಪೋಷಕಾಂಶಗಳು ಹಾಗೂ ರೋಗ ನಿರೋಧಕ ಶಕ್ತಿಯ ಗುಣಗಳು ಈ ಎದೆ ಹಾಲಿನಲ್ಲಿ ಮಾತ್ರ ಇದೆ ಎಂದು ತಿಳಿಸಿದ್ದಾರೆ.
View this post on Instagram
ಎದೆ ಹಾಲು ದಾನ ಮಾಡಿ
ಎಳೆ ಮಕ್ಕಳಿಗೆ ಎದೆಹಾಲು ತುಂಬಾನೇ ಮುಖ್ಯ. ಭಾರತದಲ್ಲಿ ಅದೆಷ್ಟೋ ಮಕ್ಕಳು ಈ ಎದೆ ಹಾಲು ಸಿಗದೆ ವಂಚಿತರಾಗುತ್ತಾರೆ. ಇಂತಹವರಿಗಾಗಿ ಎದೆ ಹಾಲು ದಾನ ಮಾಡಿ ಎಂದು ಹೇಳಿದ್ದಾರೆ. ಅಂತಹ ಮಕ್ಕಳಿಗೆ ಸಹಾಯ ಮಾಡಲಿ ಅಂತಾನೇ ಮಿಲ್ಕ್ ಬ್ಯಾಂಕ್ ಶುರುಮಾಡಿದ್ದಾರೆ ಎಂದು ಮಿಲ್ಕ್ ಬ್ಯಾಂಕ್ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಯಾವ ತಾಯಂದಿರಲ್ಲಿ ಅಗತ್ಯಕ್ಕಿಂತ ಹೆಚ್ಚು ಎದೆಹಾಲು ಇದೆ. ಯಾವ ತಾಯಂದಿರು ಎದೆಹಾಲನ್ನು ದಾನ ಮಾಡಬಹುದು ಅಂತಹವರಿಂದ ತುಂಬಾನೇ ಸಹಾಯ ಆಗುತ್ತೆ. ನಿಮ್ಮ ಜಿಲ್ಲೆಗಳಲ್ಲಿ ಈ ಮಿಲ್ಕ್ ಬ್ಯಾಂಕ್ ಇರುತ್ತೆ. ಅಲ್ಲಿ ಬಂದು ನೀವು ಎದೆಹಾಲು ದಾನ ಮಾಡಿದರೆ, ಅದೆಷ್ಟೋ ಮಕ್ಕಳಿಗೆ ಸಹಾಯ ಆಗುತ್ತೆ ಎಂದು ಮಹತ್ವದ ಮಾಹಿತಿಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’
‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಉದ್ದೇಶದಿಂದ ಮಾರ್ಚ್ 27 ರಂದು ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಭಾಗವಹಿಸುವಂತೆ ವೀಡಿಯೋ ಮೂಲಕ ಅಭಿಮಾನಿಗಳಿಗೆ ರಾಧಿಕಾ ಸಂದೇಶ ಕೊಟ್ಟಿದ್ದಾರೆ.