ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

Public TV
3 Min Read
SANDALWOOD VILATANDAY

ಬೆಂಗಳೂರು: ಇಂದು ಪ್ರೇಮಿಗಳ ದಿನವಾದ್ದರಿಂದ ನಮ್ಮ ಚಂದವನದ ಲವ್ಲಿ ಕಪಲ್ ತಮ್ಮ ಜೋಡಿ ಜೊತೆ ಲವ್ಲಿಯಾಗಿ ಈ ವಿಶೇಷ ದಿನವನ್ನು ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೂ ವಿಶ್ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ:
ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ ಇಂದು ಕ್ಯೂಟ್ ಆಗಿ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದ್ದು, ನಮ್ಮ ಚಿಕ್ಕ ಸೆಲೆಬ್ರೇಶನ್, ಥ್ಯಾಂಕ್ಸ್ ಕನ್ನ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಜ್ವಲ್ ರಾಗಿಣಿಗೆ ಕಿಸ್ ಕೊಡುತ್ತಿದ್ದು, ‘ಬ್ಲೂ ಥೀಮ್’ ನಲ್ಲಿ ತಮ್ಮ ವಿಶೇಷ ದಿನವನ್ನು ಸೆಲೆಬ್ರೆಟ್ ಮಾಡಿರುವುದು ಫೋಟೋದಲ್ಲಿ ನೋಡಬಹುದು. ಫೋಟೋದಲ್ಲಿ ಇಬ್ಬರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಈ ಪೋಸ್ಟ್ ಗೆ ರಾಗಿಣಿ ‘ಲವ್ ಯೂ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

ಪ್ರಜ್ವಲ್ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ರಾಗಿಣಿ ಅವರು ಸಹ ಪ್ರೊಫೆಷನಲ್ ಡ್ಯಾನ್ಸರ್ ಆಗಿದ್ದಾರೆ. ಆಗಾಗ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ಡಾನ್ಸ್ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಶುಭಾ ಪೂಂಜಾ ಮತ್ತು ಸುಮಂತ್:
ಸ್ಯಾಂಡಲ್‍ವುಡ್ ನಟಿ, ಬಿಗ್‍ಬಾಸ್ ಖ್ಯಾತಿಯ ಶುಭಾ ಪೂಂಜಾ ಮತ್ತು ಸುಮಂತ್ ಮಹಾಬಲ ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಬಳಿಕ ಈ ಜೋಡಿಗೆ ಇಂದು ಮೊದಲ ವ್ಯಾಲೆಂಟೈನ್ಸ್ ಡೇ. ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮುದ್ದು ಜೋಡಿಯ ಫೋಟೋ ಶೇರ್ ಮಾಡಿಕೊಂಡಿರುವ ಶುಭಾ, ನಮ್ಮಿಂದ ನಿಮಗೆ ಪ್ರೇಮಿಗಳ ದಿನದ ಶುಭಾಶಯಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಮೂಲಕ ಶುಭಾ ತಮ್ಮ ಅಭಿಮಾನಿಗಳಿಗೆ ಪ್ರೇಮಿಗಳ ದಿನದ ಶುಭಾಶಯವನ್ನು ತಿಳಿಸಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳು ಶುಭಾ ಅವರಿಗೂ ಶುಭಾಶಯವನ್ನು ಕೋರಿದ್ದಾರೆ. ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2022ರ ಜನವರಿ ಮೊದಲ ವಾರದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶ್ವೇತಾ ಮತ್ತು ಅಮಿತ್ ಶ್ರೀವಾತ್ಸವ್:
ಚಂದನವನದ ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಮಗಳೊಂದಿಗೆ ಫೋಟೋ ವೀಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇಂದು ವ್ಯಾಲೆಂಟೈನ್ಸ್ ಡೇ ವಿಶೇಷತೆಗೆಂದು ತಮ್ಮ ಪತಿ ಅಮಿತ್ ಶ್ರೀವಾತ್ಸವ್ ಜೊತೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಮಿತ್ ಶ್ವೇತಾ ಅವರಿಗೆ ಕಿಸ್ ಕೊಡುತ್ತಿದ್ದು, ಪೂಲ್ ಬಳಿ ಕೂಲ್ ಆಗಿ ನಿಂತಿದ್ದಾರೆ. ಈ ಪೋಸ್ಟ್ ಗೆ ಶ್ವೇತಾ ಅವರು, ವ್ಯಾಲೆಂಟೈನ್ #ಎಂದೆಂದಿಗೂ #ಜೋಡಿಗೋಲುಗಳು ಎಂದು ಬರೆದು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

ಕೃಷ್ಣ ಮತ್ತು ಮಿಲನಾ:
ಚಂದನವನದ ಡಾರ್ಲಿಂಗ್ ಕೃಷ್ಣ ಮತ್ತು ಚಂದನವನದ ನಟಿ ಮಿಲನಾ ಕಳೆದ ವರ್ಷ ಮದುವೆಯಾಗಿದ್ದು, ಈ ವರ್ಷ ತಮ್ಮ ಹೊಸ ಸಿನಿಮಾ ‘ಲವ್ ಮಾಕ್‍ಟೇಲ್- 2’ ಸಿನಿಮಾ ಯಶಸ್ಸಿನೊಂದಿಗೆ ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿದ್ದಾರೆ. ಮಿಲನ ಇನ್‍ಸ್ಟಾಗ್ರಾಮ್ ನಲ್ಲಿ, ನನ್ನ ಜೀವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಇದುವರೆಗೆ ಮಾಡಿದ ಅತ್ಯುತ್ತಮ ನಿರ್ಧಾರ! ನನ್ನ ಇಡೀ ಪ್ರಪಂಚ! ಎಂದು ಬರೆದು ಪತಿ ಜೊತೆಗಿನ ಕ್ಯೂಟ್ ಫೋಟೋವನ್ನು ಶೇರ್ ಮಾಡಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *