ಸ್ವಾತಂತ್ರ್ಯ ದಿನಾಚರಣೆ: ಸ್ಯಾಂಡಲ್‌ವುಡ್ ತಾರೆಯರ ಸಂಭ್ರಮ

Public TV
2 Min Read
FotoJet 3 6

ದೇಶದೆಲ್ಲೆಡೆ 78ನೇ ಸ್ವಾತಂತ್ರ‍್ಯೋತ್ಸವದ (78th Independence Day) ಸಂಭ್ರಮ ಮನೆಮಾಡಿದೆ. ಸಮಸ್ತ ಭಾರತೀಯರು ದೇಶಭಕ್ತಿ ಭಾವ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ದೇಶದ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಅಸಂಖ್ಯಾತ ಹೋರಾಟಗಾರರ ತ್ಯಾಗಬಲಿದಾನಗಳನ್ನ ಸ್ಮರಿಸುತ್ತಿದ್ದಾರೆ. ಹಾಗೆಯೇ ಸ್ಯಾಂಡಲ್‌ವುಡ್ ನಟ, ನಟಿಯರು ಕೂಡ ಸ್ವಾತಂತ್ರ್ಯ ದಿನವನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

FotoJet 37

ಹುಟ್ಟೂರು ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ‘ಕಾಂತಾರ’ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ರಾಷ್ಟ್ರ ಧ್ವಜ ಹಾರಿಸಿ ದೇಶಭಕ್ತಿ ಮೆರೆದಿದ್ದಾರೆ. ಸಮಾರಂಭದ ಫೋಟೋಗಳನ್ನು ಶೇರ್ ಮಾಡಿ, ನಾಡಿನ ಸಮಸ್ತ ಜನತೆಗೆ 78 ನೇ ಸ್ವಾತಂತ್ರ‍್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

radhika kumarswamy

ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಅವರು ತ್ರಿವರ್ಣ ಧ್ವಜ ಹಾರಿಸಿ, ಈ ಸ್ವಾತಂತ್ರ‍್ಯ ದಿನದಂದು ನಾವೆಲ್ಲರೂ ಸದಾ ನಮ್ಮ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡೋಣ. ಸರ್ವರಿಗೂ ಸ್ವಾತಂತ್ರ‍್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಲಿಪ್‌ಲಾಕ್ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ದಂಪತಿ

ಸಾವಿರಬಗೆಯಲಿ ಸಾರುತಿದೆ ಸ್ವಾತಂತ್ರ‍್ಯದ ಲಾಸ್ಯ. ಬಾನು ಭುವಿಯು ಬರೆಯುತಿದೆ ಸಿರಿಬೆಳಕಿನ ಭಾಷ್ಯ. 78ನೇ ಸ್ವಾತಂತ್ಯೋತ್ಸವದ ಶುಭಾಶಯಗಳು ಎಂದು ನಟಿ ರಂಜನಿ ರಾಘವನ್ (Ranjani Raghavan) ಬರೆದುಕೊಂಡಿದ್ದಾರೆ.

 

View this post on Instagram

 

A post shared by Deepika Das (@deepika__das)

ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳು. ನಮ್ಮ ರಾಷ್ಟ್ರಕ್ಕೆ ಉಜ್ವಲ ಮತ್ತು ಹೆಚ್ಚು ಸಮೃದ್ಧ ಭವಿಷ್ಯಕ್ಕಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡೋಣ ಎಂದು ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್ (Deepika Das) ಎಂದಿದ್ದಾರೆ.

ಶಾಲೆಯೊಂದರಲ್ಲಿ ನಟಿ ಅತಿಥಿಯಾಗಿ ಭಾಗವಹಿಸಿದ್ದು, ರಾಷ್ಟ್ರ ಧ್ವಜ ಹಾರಿಸಿ ದೇಶಭಕ್ತಿ ಮೆರೆದಿದ್ದಾರೆ. ಬಳಿಕ ಸ್ವಾತಂತ್ರ‍್ಯದ ಚೈತನ್ಯವು ಇತರರಿಂದ ಸ್ವಾತಂತ್ರ‍್ಯವಲ್ಲ ಆದರೆ ನಮ್ಮದೇ ಭವಿಷ್ಯವನ್ನು ರೂಪಿಸುವ ಸ್ವಾತಂತ್ರ‍್ಯದ ಬಗ್ಗೆ. ಕಷ್ಟಪಟ್ಟು ಕೆಲಸ ಮಾಡುವ ಮೂಲಕ, ದಯೆಯಿಂದ ಮತ್ತು ನಮ್ಮ ಮೌಲ್ಯಗಳಿಗೆ ನಿಷ್ಠರಾಗಿ, ನಮ್ಮ ಸ್ವಾತಂತ್ರ‍್ಯವನ್ನು ಸಾಧ್ಯವಾಗಿಸಿದವರ ತ್ಯಾಗವನ್ನು ನಾವು ಗೌರವಿಸುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಶೃಂಗೇರಿ ಬರೆದುಕೊಂಡಿದ್ದಾರೆ.

Share This Article