ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಫಸ್ಟ್ ಟೈಂ ನಾಯಕಿಯರೆಲ್ಲ ಒಟ್ಟಿಗೆ ಸೇರಿ ತಮ್ಮ ಬಟ್ಟೆಗಳನ್ನ ಹರಾಜು ಮಾಡುವ ಕಾರ್ಯಕ್ರಮ ಆಯೋಜಿಸಿ ಅದರಿಂದ ಬಂದ ಹಣವನ್ನು ಉತ್ತಮ ಕಾರ್ಯಕ್ಕಾಗಿ ವಿನಿಯೋಗಿಸುವ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
`ದಿ ವ್ಯಾನಿಟಿ ಟ್ರಂಕ್ ಸೇಲ್’ ಹೆಸರಿನಲ್ಲಿ ಸ್ಯಾಂಡಲ್‍ವುಡ್ ನಾಯಕಿಯರ ಬೆಲೆ ಬಾಳುವ ಉಡುಗೆಗಳು ಹರಾಜು ಮಾಡಲಾಯಿತು. ಇಂದು ಬೆಳಗ್ಗೆ 12 ಗಂಟೆಯಿಂದ ಸಂಜೆ 5 ಗಂಟೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಿ ಹೈವ್ ನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದಂತೆ ಕೇವಲ ಒಂದು ಗಂಟೆಯಲ್ಲಿ ಎಲ್ಲ ಬಟ್ಟೆಗಳು ಮಾರಾಟವಾಗಿದೆ. ಕೇವಲ ಒಂದು ಗಂಟೆಯಲ್ಲಿ ಸುಮಾರು 80 ಸಾವಿರ ಹಣ ಕಲೆಕ್ಷನ್ ಆಗಿದೆ.
Advertisement
Advertisement
ಶೃತಿ ಹರಿಹರನ್ ಐಡಿಯಾ: ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೆ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.
Advertisement
Advertisement
ಎನ್‍ಜಿಒಗೆ ಹಣ: ಶೃತಿ ಹರಿಹರನ್ ಯೋಚನೆಯಿಂದಾಗಿ “ದಿ ವ್ಯಾನಿಟಿ ಟ್ರಂಕ್ ಸೇಲ್’ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ.
ಯಾರೆಲ್ಲ ಕೈಜೋಡಿಸಿದ್ದರು?: ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡ, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವಾತ್ಸ, ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.