ನಟಿ ವಿಜಯಲಕ್ಷ್ಮಿ ತಾಯಿ ನಿಧನ

Public TV
1 Min Read
vijayalakshmi 2

ಬೆಂಗಳೂರು: ನಾಗಮಂಡಲ ಸಿನಿಮಾ ಖ್ಯಾತಿಯ ವಿಜಯಲಕ್ಷ್ಮಿ ಅವರ ತಾಯಿ ವಿಜಯಾ ಸುಂದರಂ (75) ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.

ಗಾಂಧಿನಗರದ ಸಂತೃಪ್ತಿ ಹೊಟೇಲ್‍ನಲ್ಲಿ ವಿಜಯಲಕ್ಷ್ಮಿ ಕುಟುಂಬ ವಾಸವಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ತಾಯಿ ಸಂಜೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ರೇಷ್ಮೆ ಬೆಳೆಗಾರರಿಗೆ ವಿಶಿಷ್ಟ ಗುರುತಿನ ಚೀಟಿ: ನಾರಾಯಣಗೌಡ

VIJAYALAKSHMI e1550805517256

ಬೆಂಗಳೂರಿನ ಗಾಂಧಿನಗರದಲಿರೋ ಸಂತೃಪ್ತಿ ರೆಸಿಡೆನ್ಸಿಯಲ್ಲಿ ವಿಜಯಲಕ್ಷ್ಮಿ ತಾಯಿ ಹಾಗು ಅಕ್ಕ ಉಷಾ ಕಳೆದ ಮೂರು ದಿನಗಳಿಂದ ಅಲ್ಲಿಯೇ ತಂಗಿದ್ದರು. ಇಂದು ಚೆನ್ನೈಗೆ ಹೋಗಲು ವಿಜಯಲಕ್ಷ್ಮಿ ಕುಟುಂಬ ಸಿದ್ಧವಾಗಿತ್ತು. ಇಂದು ಬೆಳಗ್ಗೆ ವಿಜಯಲಕ್ಷ್ಮಿ ಅವರ ತಾಯಿ ದಿಢೀರ್ ನಿಧನದಿಂದ ವಿಜಯಲಕ್ಷ್ಮಿ ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ:  ಸಿ.ಎಂಗೆ ಉಡುಗೊರೆ ನೀಡಿದ್ದ ಬೆಳ್ಳಿ ಗದೆಯನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ ಬಿ.ಸಿ.ಪಾಟೀಲ್

vijayalakshmi

ಸಾಕಷ್ಟು ಸಮಸ್ಯೆಯಿಂದ ನೊಂದಿದ್ದ ನಟಿ ವಿಜಯಲಕ್ಷ್ಮಿ ಅವರ ಅಕ್ಕ ಉಷಾ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಕ್ಕನಿಗೆ ಚಿಕಿತ್ಸೆ ಕೊಡಿಸಲೂ ಆಗದೇ ಅಸಹಾಯಕರಾಗಿದ್ದಾರೆ. ತಾಯಿ ಅಂತ್ಯಕ್ರಿಯೆಗಾಗಿ ಕಷ್ಟದಲ್ಲಿರೋ ವಿಜಯಲಕ್ಷ್ಮಿ ಸಹಾಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಬಾ. ಮಾ ಹರೀಶ್ ಬಂದಿದ್ದಾರೆ. ಸಂತೃಪ್ತಿ ಹೋಟೆಲ್ ಗೆ ಬಂದು ವಿಜಯಲಕ್ಷ್ಮಿಗೆ ಸಾಂತ್ವನವನ್ನು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *