ಚಂದನವನದ ಚೆಂದದ ತಾರೆಯರು ಹಾಲಿಡೇ ಎಂಜಾಯ್ ಮಾಡಲು ನಾನಾ ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಬೇಸಿಗೆ ಬಿಸಿಯನ್ನು ಕಳೆಯಲೆಂದೇ ಅವರು ಕೂಲ್ ಕೂಲ್ ಪ್ರದೇಶಕ್ಕೆ ಹಾರಿ, ಪ್ರಕೃತಿಯೊಂದಿಗೆ ಬೆರೆತಿದ್ದಾರೆ. ರಿಲ್ಯಾಕ್ಸೇಷನ್‌ಗಾಗಿ ದೂರದ ಊರಿನಲ್ಲಿ ಬೀಡು ಬಿಟ್ಟಿರೋ ನಟಿಮಣಿಯರು ಅಲ್ಲಿನ ಕ್ಷಣಗಳನ್ನು ಹಿಡಿದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಗಂಡ್ ಹೈಕ್ಳ ನಿದ್ದೆಕೆಡಿಸಿದ್ದಾರೆ. ಕೂಲ್ ಕೂಲ್ ಪ್ರದೇಶದಲ್ಲಿ ಪಯಣ ಬೆಳೆಸಿರುವ ನಟಿಯರು ಯಾರು? ಅವರು ಎಲ್ಲಿದ್ದಾರೆ ಎನ್ನುವ ಕಂಪ್ಲೀಟ್ ಸ್ಟೋರಿ ಇದು.
ಬೇಸಿಗೆ ಬಂತು ಅಂದ್ರೆ ಸಾಕು ಎಲ್ಲರಿಗೂ ನೆನಪಾಗೋದು ರಜಾ ಮಜಾ ಅಷ್ಟೇ. ಬೇಸಿಗೆ ಶುರುವಾಗುತ್ತಿದ್ದಂತೆ ಹಾಲಿಡೇ ಟ್ರೀಪ್ ಪ್ಲ್ಯಾನ್ ಶುರುವಾಗುತ್ತದೆ. ಅದೇ ರೀತಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಛಾಪು ಮೂಡಿಸಿರೋ ನಟಿಯರಾದ ಅನುಪಮ ಗೌಡ, ನೇಹಾ ಗೌಡ, ಸೋನಾಲ್, ನಮೃತಾ ಗೌಡ, ಕಾರುಣ್ಯ ರಾಮ್ ಸೇರಿದಂತೆ ಹಲವು ನಟಿಮಣಿಯರು ಹಾಲಿಡೇಯಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸದ್ಯ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಟಿವಿ ಪರದೆಯ ಕ್ವೀನ್ ಅನುಪಮ ಗೌಡ, ಬಿಗ್ ಬಾಸ್, ನಮ್ಮಮ್ಮ ಸೂಪರ್ ಸ್ಟಾರ್ ಶೋ ಮೂಲಕ ಸದ್ದು ಮಾಡಿದವರು. ಇದೀಗ ಕೆಲಸದ ಮಧ್ಯೆ ಕೊಂಚ ಫ್ರೀ ಮಾಡಿಕೊಂಡು ಗೋವಾ ಟ್ರೀಪ್‌ಗೆ ಹೋಗಿದ್ದಾರೆ. ಅನುಪಮಾಗೆ ಜತೆಗೆ ಸ್ನೇಹಿತೆಯರಾದ ನಟಿ ನೇಹಾ ಗೌಡ, ಇಶಿತಾ ವರ್ಷ ಕೂಡ ಸಾಥ್ ನೀಡಿದ್ದಾರೆ.
View this post on Instagram
ಕಿರುತೆರೆ ನಟಿ ಅನುಪಮಾ ಗೌಡ ಗೋವಾದ ಸುಂದರ ತಾಣದಲ್ಲಿ ರಿಲ್ಯಾಕ್ಸ್ ಮಾಡುತ್ತಾ, ಬೆಸ್ಟ್ ಫ್ರೆಂಡ್ಸ್ ನೇಹಾ,ಇಶಿತಾ ಜೊತೆಗಿನ ಫೋಟೋ ಶೇರ್ ಮಾಡಿ, 6 ತಿಂಗಳ ಹಳೆಯ ಟ್ರಿಪ್ ಫ್ಲ್ಯಾನ್, ಕೊನೆಗೂ ಗೋವಾ ಪ್ಲ್ಯಾನ್ ಪೂರ್ಣವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಶೇರ್ ಮಾಡಿದ್ದಾರೆ.
View this post on Instagram
ಸ್ಮಾಲ್ ಸ್ಕ್ರೀನ್‌ನಲ್ಲಿ ಒನ್ ಆಫ್ ದಿ ಫೇಮಸ್ ನಟಿ ನಮೃತಾ ಗೌಡ `ನಾಗಿಣಿ 2′ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಶಿವಾನಿ ಪಾತ್ರಧಾರಿಯಾಗಿ ಸೈ ಎನಿಸಿಕೊಂಡವರು. ಸೀರಿಯಲ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸ್ನೇಹಿತೆಯ ಜತೆ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಸಖತ್ ಹಾಟ್ ಫೋಟೋಶೂಟ್‌ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ. ಈ ಸದ್ಯ ಈ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.
View this post on Instagram
`ರಾಬರ್ಟ್’ ಖ್ಯಾತಿಯ ನಟಿ ಸೋನಾಲ್ ಮಾಂಟೆರೊ ಸದ್ಯ ಸರೋಜಿನಿ ನಾಯ್ಡು ಬಯೋಪಿಕ್ ಮೂಲಕ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ಕನ್ನಡದ `ಗಾಳಿಪಟ 2′, `ಬನಾರಸ್’, `ಬುದ್ಧಿವಂತ 2′ ಸೇರಿದಂತೆ ಸಾಲು ಸಾಲು ಚಿತ್ರಗಳು ಸೋನಾಲ್ ಕೈಯಲ್ಲಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟ್‌ನಿಂದ ಬ್ಯುಸಿಯಿದ್ದ ಸೋನಾಲ್, ಕೆಲಸಕ್ಕೆ ಬ್ರೇಕ್ ಹಾಕಿ ಕಜಕಿಸ್ತಾನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ತಾಯಿಯ ಜತೆ ಕಜಕಸ್ತಾನ ಸುಂದರ ತಾಣಗಳಿಗೆ ಭೇಟಿ ನೀಡಿರೋ ಫೋಟೋಸ್, ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ
ಸ್ಯಾಂಡಲ್‌ವುಡ್ ನಟಿಮಣಿಯರು ಬೇಸಿಗೆ ಕಾಲದಲ್ಲಿ ಭೇಟಿ ಕೊಟ್ಟಿರೋ ಟ್ರಾವೆಲ್ ಸ್ಟೋರಿ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ನೆಚ್ಚಿನ ನಟಿಯರ ಖುಷಿ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.