ಬೆಂಗಳೂರು: ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರಕ್ಟರ್, ಕೆಲಸ ಕಾರ್ಯ ಇಲ್ಲದೇ ಮನೆಯಲ್ಲಿ ಕುಳಿತಿದ್ದಾರೆ ಎಂದು ನಟಿ ಸಂಜನಾ ಕಿಡಿಕಾರಿದ್ದಾರೆ.
ತನ್ನ ವಿರುದ್ಧ ರವಿ ಶ್ರೀವತ್ಸವ ಮಾಡಿದ ಆರೋಪಗಳಿಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ರವಿ ಶ್ರೀವತ್ಸ ಮೂರು ಸಿನಿಮಾ ಮಾಡಿದ್ದಾರೆ. ನಾನು 45 ಸಿನಿಮಾ ಮಾಡಿದ್ದೇನೆ. ಈಗ ಯಾವುದೇ ಸಿನಿಮಾ ಇಲ್ಲದೇ ಅವರು ಮನೆಯಲ್ಲಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು
Advertisement
Advertisement
ಹುಟ್ಟಿನ ಡೇಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು 1989ರಲ್ಲಿ ಹುಟ್ಟಿದ್ದು ಬೇಕಾದರೆ ಪಾಸ್ ಪೋರ್ಟ್ ಕಳುಹಿಸಿ ಕೊಡುತ್ತೇನೆ. ನಿರ್ಮಾಪಕರಾದ ಶೈಲೇಂದ್ರ ಬಾಬು ಅವರು ಏನು ಮಾಡಿಲ್ಲ. ಈ ಘಟನೆಯಲ್ಲಿ ಅವರನ್ನು ಎಳೆದು ತರೋದು ಸರಿಯಲ್ಲ. ಶೈಲೇಂದ್ರ ಬಾಬು ಅವರ ಬಗ್ಗೆ ಅಂದು ಮಾತನಾಡಿಲ್ಲ. ಇಂದು ಕೂಡ ಮಾತನಾಡುವುದಿಲ್ಲ ಎಂದರು.
Advertisement
ಎರಡೂವರೆ ಲಕ್ಷ ಪಡೆದ ಸಂಜನಾ ಆಸ್ತಿ ಕೋಟಿಗಟ್ಟಲೇ ಆಗಿದ್ದು, ಈಗ ಜಾಗ್ವಾರ್ ಕಾರಿನಲ್ಲಿ ಓಡುತ್ತಿದ್ದಾರೆ ಐಟಿ ರಿಟನ್ರ್ಸ್ ಪಾವತಿಸಿದ್ದಾರಾ ಎನ್ನುವ ಪ್ರಶ್ನೆಗೆ, ದೇವರು ಅಂತ ಮೇಲೆ ಒಬ್ಬ ಇದ್ದಾನೆ. ಗಂಡ ಹೆಂಡತಿ ಸಿನಿಮಾಗೆ ನಾನು ತೆಗೆದುಕೊಂಡಿದ್ದು ಒಂದುಕಾಲು ಲಕ್ಷ. ಇಂದು ನನ್ನ ಒಂದು ದಿನದ ಸಂಬಳ ಇದು. ನನ್ನ ಬಳಿ ಇರುವ ಆಸ್ತಿ ಹಣಗಳಿಗೆ ಐಟಿ ರಿಟನ್ರ್ಸ್ ಇದೆ. ನನ್ನ ಸ್ಟಾಪ್ ಸಂಬಳ ಬಂದು 14 ಸಾವಿರ ರೂ. ಎಂದು ತಿರುಗೇಟು ನೀಡಿದರು.
Advertisement
ಗಂಡ ಹೆಂಡತಿ ಸಿನಿಮಾವನ್ನು ನೋಡಿದರೆ ಯಾವ ಯಾವ ಆಂಗಲ್ ಅಲ್ಲಿ ಶೂಟ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. 12 ವರ್ಷಗಳ ಹಿಂದೆ ಮಾಡಿದ್ದ್ದ ಈ ಕೆಲಸಕ್ಕೆ ದೇವರು ಅವರಿಗೆ ಕೆಲಸವನ್ನೇ ಕೊಟ್ಟಿಲ್ಲ. ತಂದೆಯ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ತಂದೆಗೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವುದು ಇಷ್ಟನೇ ಇಲ್ಲ. ಅವತ್ತಿಗೂ ಇಷ್ಟವಿಲ್ಲ. ಇವತ್ತಿಗೂ ಇಷ್ಟವಿಲ್ಲ. ಇವತ್ತು ಯಾಕೆ ಮಾತನಾಡುವುದಿಲ್ಲ ಎಂದರೆ ನನ್ನ ಸರ್ಕಸ್ ನೋಡಿ ಮಾತನಾಡುತ್ತಿಲ್ಲ ಎಂದರು.
ನಾಲ್ಕೈದು ಬಾರಿ ಸಿನಿಮಾವನ್ನು ನೋಡಿದ್ದೆ. ಅದಕ್ಕೆ ನಾನು ಸರ್ ನನಗೆ ಮಾಡುವುದಕ್ಕೆ ಧೈರ್ಯ ಬರುತ್ತಿಲ್ಲ. ಸ್ಟಲ್ಪ ಭಯವಾಗುತ್ತಿದೆ ಎಂದು ಹೇಳಿದ್ದೆ. ಅದಕ್ಕೆ ಅವರು ಇಲ್ಲಮ್ಮ ನಾವು ಮಾಡುವುದು ಬರೀ ಸೌತ್ ಇಂಡಿಯನ್ ವರ್ಷನ್. ನಮ್ಮ ನೇಟಿವಿಟಿ ಪ್ರಕಾರವೇ ಮಾಡುತ್ತೇವೆ. ನಮ್ಮ ನೇಟಿವಿಟಿ ಪ್ರಕಾರ ಮಾಡಲಿಲ್ಲ ಅಂದರೆ ಫ್ಯಾಮಿಲಿ ಪ್ರೇಕ್ಷಕರು ಬರುವುದಿಲ್ಲ. ಹೀಗಾದರೆ ಸಿನಿಮಾ ಫ್ಲಾಪ್ ಆಗುತ್ತೆ ಅಂದಿದ್ರು. ಅವತ್ತು ಅವರು ಹೇಳಿದ್ದೆ ಬೇರೆ ಮಾತನಾಡಿದ್ದೇ ಬೇರೆ, ಇಂದು ಮಾತನಾಡುತ್ತಿರುವುದೇ ಬೇರೆ ಎಂದು ಸಂಜನಾ ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಸಿನಿಮಾದಲ್ಲಿ 40-50 ಕಿಸ್ ದೃಶ್ಯಗಳನ್ನು ತೆಗೆದಿದ್ದಾರೆ. ಗಂಡ ಹೆಂಡತಿ ಪಾರ್ಟ್ 2 ವಿತ್‍ಔಟ್ ಶೂಟಿಂಗ್ ರಿಲೀಸ್ ಮಾಡುವಷ್ಟು ದೃಶ್ಯಗಳನ್ನು ತೆಗೆದಿದ್ದಾರೆ. ಅದರಲ್ಲಿ ಸೆನ್ಸಾರ್ ಮಂಡಳಿ ಸ್ವಲ್ಪ ಸೀನ್‍ಗಳಿಗೆ ಕತ್ತರಿ ಹಾಕಿದೆ. ಅವರನ್ನೇ ಬೇಕಾದ್ರೆ ಕೇಳಿ. ಕಡಿತಗೊಳಿಸಿದ ಮೇಲೆ 20% ಸಿನಿಮಾವಾಗಿದ್ದು, ಅಷ್ಟು ಅಶ್ಲೀಲವಾಗಿತ್ತು. ಮಾಡಲು ಇಷ್ಟವಿಲ್ಲದಿದ್ದರೂ ಹೆದರಿಸಿ ನಿಮಗೆ ಏನ್‍ಗೊತ್ತು ದೊಡ್ಡು ಚಾನ್ಸ್ ಕೊಡುತ್ತಿದ್ದೇವೆ. ನಿರ್ದೇಶಕರಿಗೆ ಮರ್ಯಾದೆ ಕೊಡುವುದಿಲ್ಲವಾ, ಸಿನಿಮಾ ಕೆಡಿಸುವುದಕ್ಕೆ ಬಂದಿದ್ದೀರಾ ಎಂದು ಹೆದರಿಸಿದ್ದರು ಎಂಬುದಾಗಿ ಹೇಳಿ ಅಂದಿನ ಶೂಟಿಂಗ್ ಘಟನೆಯನ್ನು ನೆನಪಿಸಿದರು.
ಈಗಾಗಲೇ ಸಮಸ್ಯೆಗಳಿಂದ ಬದುಕುತ್ತಿರುವವರಿಗೆ ಏನೂ ಬೈಯಲು ಇಷ್ಟ ಪಡುವುದಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಬಹುದು ಎಂದು ತಿಳಿಸಿ ಮಾತಿಗೆ ಸಂಜನಾ ವಿರಾಮ ಹಾಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=_I8lmYouzBk
https://www.youtube.com/watch?v=bI0PW29YLrU
https://www.youtube.com/watch?v=Pr1WxEPsJPc
https://www.youtube.com/watch?v=Fngx4OL8iUY
https://www.youtube.com/watch?v=EhTC1JWIn1I