ಚಂದನವನದ ನಟಿ ಸಂಗೀತಾ ಭಟ್ ‘ಮೀಟೂ’ ಪ್ರಕರಣದಲ್ಲಿ ತಮಗಾದ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆ ಈ ನಟಿ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ಮತ್ತೆ ಕಿಶೋರ್ ಜೋಡಿಯಾಗಿ ಸಿನಿಜರ್ನಿ ಮುಂದುರಿವಸಲು ಚಂದನವನಕ್ಕೆ ಬರುತ್ತಿದ್ದಾರೆ.
Advertisement
ʼದಯವಿಟ್ಟು ಗಮನಿಸಿʼ, ʼಎರಡನೇ ಸಲʼ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಈ ನಟಿ ಮೀಟೂ ಪ್ರಕರಣದ ನಂತರ ಮತ್ತೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಹಲವು ವರ್ಷಗಳ ನಂತರ ಸಿನಿಲೋಕಕ್ಕೆ ಬರುತ್ತಿದ್ದೇನೆ ಎಂದು ಸಂಗೀತಾ ಸೋಶಿಯಲ್ ಮೀಡಿಯಾದಲ್ಲಿ ಬರೆದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಸಂಗೀತಾ, ನಮಸ್ಕಾರ, ಈ ಪೋಸ್ಟ್ ನೊಂದಿಗೆ, ನನ್ನ ಬಹುನಿರೀಕ್ಷಿತ ಸಿನಿಮಾದಿಂದ ಪುನರಾಗಮನವನ್ನು ಘೋಷಿಸಲು ನಾನು ತುಂಬ ಸಮಯ ಕಾತರದಿಂದ ಕಾಯುತ್ತಿದ್ದೆ. ನಟನೆ ಯಾವಾಗಲೂ ನನ್ನ ಮೊದಲ ಪ್ರೀತಿ, ಅದರಿಂದ ದೂರ ಉಳಿಯುವುದು ನನ್ನ ಜೀವನದ ಕಠಿಣ ಭಾಗವಾಗಿತ್ತು. ನೀವೆಲ್ಲರೂ ಈ ಹಿಂದೆ ನನ್ನ ಕೆಲಸಕ್ಕೆ ತುಂಬಾ ಮೆಚ್ಚುಗೆ ಹಾಗೂ ಬೆಂಬಲ ನೀಡಿದ್ದೀರಿ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ
Advertisement
View this post on Instagram
Advertisement
ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಬೆಂಬಲ ಸದಾಕಾಲ ಹೀಗೆ ನನ್ನ ಕೆಲಸದ ಮೇಲೆ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ನಾನು ಪ್ರಸ್ತುತ ಭಾಗವಾಗಿರುವ ಚಲನಚಿತ್ರದ ಕೆಲವು ಚಿತ್ರಪಟಗಳನ್ನೂ ಹಂಚಿಕೊಳ್ಳುತ್ತಿದ್ದೇನೆ. ಚಿತ್ರೀಕರಣದ ಅಂತಿಮ ಹಂತದಲ್ಲಿದ್ದೇವೆ. ನಾನು ಪ್ರಸ್ತುತ ಭಾಗವಾಗಿರುವ ಇತರ ಫೋಟೋಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್‍ಸ್ಟಾಗ್ರಾಮ್‍ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿರಿ. ಸುಂದರ ನೆನಪುಗಳಿಗಾಗಿ ‘ರೂಪಾಂತರ’ ತಂಡಕ್ಕೆ ಧನ್ಯವಾದಗಳು ಎಂದು ಬರೆದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Advertisement
‘ರೂಪಾಂತರ’ ಸಿನಿಮಾತಂಡದ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಂಗೀತಾ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಚಂದನವನದ ‘ಹುಲಿ’ ಸಿನಿಮಾ ಖ್ಯಾತಿಯ ಕಿಶೋರ್ ಮತ್ತು ಚಿತ್ರತಂಡದ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಮೂಡಿಗೆರೆಯಲ್ಲಿ ಶೂಟ್ ನಡೆಯುತ್ತಿದ್ದು, ಪ್ರಕೃತಿಯ ಮಡಿಲಿನಲ್ಲಿ ಸಿನಿಮಾ ಶೂಟ್ ನಡೆಯುತ್ತಿದೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್