ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗಿರಲಿ: ಮೋದಿ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್

Public TV
1 Min Read
NARENDRA MODI RAMYA

ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ 72 ನೇ ವರ್ಷದ ಹುಟ್ಟುಹಬ್ಬ (Birthday). ಈ ಹಿನ್ನೆಲೆಯಲ್ಲಿ ಗಣ್ಯರು, ರಾಜಕೀಯ ಮುಖಂಡರು ಎಲ್ಲರೂ ಪ್ರಧಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಂತೆಯೇ ಮೋಹಕ ತಾರೆ, ಮಾಜಿ ಲೋಕಸಭಾ ಸದಸ್ಯೆ ರಮ್ಯಾ (Ramya) ಕೂಡ ನರೇಂದ್ರ ಮೋದಿಯವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗಿರಲಿ ಎಂದು ಶುಭ ಹಾರೈಸಿದ್ದಾರೆ. ರಮ್ಯಾ ಪ್ರಧಾನಿಗಳಿಗೆ ವಿಶ್ ಮಾಡುತ್ತಿದ್ದಂತೆಯೇ ಹಲವಾರು ಮಂದಿ ಈ ಟ್ವೀಟ್‍ (Tweet) ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅವರಿಗೆ 72ರ ಸಂಭ್ರಮ – ನಮೀಬಿಯಾದಿಂದ ಭಾರತಕ್ಕೆ 8 ಚೀತಾ

ramya 2

ಒಟ್ಟಿನಲ್ಲಿ ಇದೀಗ ತಮ್ಮ ರಾಜಕೀಯ (Political) ಎದುರಾಳಿ ಪಕ್ಷದ ಮುಖಂಡರಿಗೆ ಶುಭ ಕೋರುವ ಮೂಲಕ ರಾಜಕೀಯವೇ ಬೇರೆ, ಮಾನವೀಯತೆಯೇ ಬೇರೆ ಎಂಬುದನ್ನು ಮನದಟ್ಟು ಮಾಡಿಸಿದ್ದು, ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಇದನ್ನೂ ಓದಿ: 70 ವರ್ಷಗಳ ನಂತರ ಭಾರತಕ್ಕೆ ಮರಳಿದ ಚೀತಾ – ನಮೀಬಿಯಾದ 8 ಚೀತಾಗಳನ್ನು ಬಿಡುಗಡೆ ಮಾಡಿದ ಮೋದಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *