ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ನ.29 ರಂದು ಅವರ ಹುಟ್ಟುಹಬ್ಬದ ಹಿನ್ನೆಲೆ ಆಫ್ರಿಕಾಗೆ ತೆರಳಿದ್ದಾರೆ. ಅಲ್ಲಿನ ಸುಂದರ ಜಾಗಗಳಿಗೆ ನಟಿ ಭೇಟಿ ನೀಡಿದ್ದಾರೆ. ಇದೀಗ ಬುಡಕಟ್ಟು ಮಹಿಳೆಯರ ಜೊತೆ ನಟಿ ಹೆಜ್ಜೆ ಹಾಕಿದ್ದಾರೆ. ಈ ಕುರಿತ ಪೋಸ್ಟ್‌ವೊಂದನ್ನು ನಟಿ ಶೇರ್ ಮಾಡಿದ್ದಾರೆ.
View this post on Instagram
ನ.29ರಂದು ರಮ್ಯಾ ಆಫ್ರಿಕಾದಲ್ಲಿ ಜನ್ಮದಿನವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಇಲ್ಲಿಯ ಹುಲಿ, ಆನೆ, ಸಿಂಹ, ಜಿರಾಫೆ ಹೀಗೆ ನಾನಾ ಪ್ರಾಣಿಗಳ ಫೋಟೋವನ್ನು ಸುಂದರವಾಗಿ ಸೆರೆಹಿಡಿದ್ದಾರೆ. ಬಳಿಕ ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ರಮ್ಯಾ ನೃತ್ಯ ಮಾಡಿರುವ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.
ಬುಡಕಟ್ಟು ಮಹಿಳೆಯರು ಕೆಂಪು ಬಣ್ಣದ ಉಡುಪು ತೊಟ್ಟಿದ್ದಾರೆ. ತಮ್ಮ ಸಂಪ್ರದಾಯದಂತೆ ಆಭರಣಗಳನ್ನು ಧರಿಸಿಕೊಂಡಿದ್ದಾರೆ. ಹಾಗೆ ಅದ್ಭುತ ಅನಿಸೋ ನೃತ್ಯವನ್ನು ಮಾಡಿದ್ದಾರೆ. ಈ ವಿಶೇಷ ನೃತ್ಯದಲ್ಲಿ ರಮ್ಯಾ ಕೂಡ ಭಾಗಿ ಆಗಿದ್ದಾರೆ. ಅಷ್ಟೇ ಖುಷಿಯಿಂದಲೇ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
ಅಂದಹಾಗೆ, ಈ ಹಿಂದೆ `ಉತ್ತರಕಾಂಡ’ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ದರು. ಆ ನಂತರ ಈ ಸಿನಿಮಾದಿಂದ ನಟಿ ಹೊರಬಂದಿದ್ದರು. ಮತ್ತೆ ರಮ್ಯಾ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಆಸೆಪಟ್ಟಿದ್ದ ಫ್ಯಾನ್ಸ್‌ಗೆ ನಿರಾಸೆ ಆಗಿತ್ತು. ಇದೀಗ ಅವರ ಕಮ್‌ಬ್ಯಾಕ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.