ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಬಣ್ಣ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಚಿತ್ರರಂಗದವರಿಂದ ದೂರವಿಲ್ಲ. ಹೊಸಬರಿಗೆ, ಹೊಸ ಚಿತ್ರತಂಡಕ್ಕೆ ಸಾಥ್ ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಆದರೆ ಈಗ ರಮ್ಯಾ ತಮ್ಮನ್ನು ತಾವೇ ಸ್ವತಃ ಡ್ರಾಮಾ ಕ್ವೀನ್ ಎಂದು ಕರೆದುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗುವಂತಹ ವಿಡಿಯೋ ಶೇರ್ ಮಾಡಿ, ರಮ್ಯಾ ಕಾಮೆಂಟ್ ಮಾಡಿದ್ದಾರೆ.

View this post on Instagram
ಈ ಶೋನಲ್ಲಿ ನಟಿ ರಮ್ಯಾ ಡಿಫರೆಂಟ್ ಆಗಿ ಎಕ್ಸಪ್ರೇಶನ್ ನೀಡಿದ್ದರು. ಈ ವಿಡಿಯೋ ನೋಡಿ ಟ್ರೋಲಿಗರಿಗೂ ಮುದ್ದಾಗಿ ಕಾಣಿಸಿದ ಕಾರಣ, ಮೋಹಕತಾರೆ ಅಂತಾ ಟೈಟಲ್ ನೀಡಿ ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ನೋಡಿ, ರಮ್ಯಾ ರಿಯಾಕ್ಟ್ ಮಾಡಿದ್ದು, ತಾವು ಡ್ರಾಮಾ ಕ್ವೀನ್ ಅಂತಾ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಅಭಿಮಾನಿಗಳ ಆಸೆಯಂತೆ ನಟಿ ರಮ್ಯಾ ಸದ್ಯದಲ್ಲೇ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಯಾವ ಸಿನಿಮಾ, ಯಾವ ಬಗೆಯ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಕಾಣಿಸಿಕೊಳ್ಳುತ್ತಾರೆ ಅಂತಾ ಸದ್ಯದಲ್ಲೇ ರಿವೀಲ್ ಆಗಲಿದೆ.


