ಬೆಂಗಳೂರು: ಸಾಂಡಲ್‍ವುಡ್‍ನಲ್ಲಿ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿಯಾದ ರಚಿತಾ ರಾಮ್ ಅವರು ಬ್ಯಾಟ್ ಹಿಡಿದು ಮೈದಾನದಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ಹಲವು ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ರಚಿತರಾಮ್ ಅವರು ಯಾವ ತಂಡದ ಪರವಾಗಿ ಆಡಲಿದ್ದಾರೆ ಎಂಬ ಗೊಂದಲ ಇದೀಗ ಅಭಿಮಾನಿಗಳಲ್ಲಿ ಉಂಟಾಗಬಹುದು. ಆದ್ರೆ ಇದರ ಅಸಲಿ ಕಹಾನಿಯೇ ಬೇರೆ ಇದೆ.
https://www.instagram.com/p/BmA-38qAwvP/?taken-by=rachita_ram
ಹೌದು. ಸೂಪರ್ ಸ್ಟಾರ್ ಉಪೇಂದ್ರರವರು ಅಭಿನಯಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ರಚಿತಾರಾಮ್ ನಟಿಯಾಗಿ ಅಭಿನಯಿಸುತ್ತಿದ್ದು, ಚಿತ್ರಿಕರಣದ ವೇಳೆ ಸಿನಿಮಾ ಸೆಟ್‍ನಲ್ಲೆ ಮೈದಾನಕ್ಕಿಳಿದು 4-5 ಎಸೆತಗಳಿಗೆ ಬ್ಯಾಟ್ ಬೀಸಿದ್ದಾರೆ. ನಟಿ ಜೊತೆಗೆ ಉಪೇಂದ್ರರವರು ಕೂಡ ಸಾಥ್ ನೀಡಿದ್ದಾರೆ.
ರಚಿತಾರಾಮ್ ಕ್ರಿಕೆಟ್ ಆಡುತ್ತಿರುವ ಫೋಟೋಗಳು ಮತ್ತು ವಿಡಿಯೋವನ್ನು ಇನ್ಸ್ ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ತುಂಬಾ ದಿನಗಳ ನಂತರ ಕ್ರಿಕೆಟ್ ಆಡಿದ್ದೇನೆ. ಇದರಿಂದಾಗಿ ನನ್ನ ಬ್ಯಾಲದ ನೆನಪುಗಳು ಮರುಕಳಿಸುತ್ತಿವೆ. ನನಗೆ ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ನಟಿಯ ಫೋಟೋಗಳಿಗೆ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸದ್ಯ ರಚಿತರಾಮ್ ಆರ್ ಚಂದ್ರುರವರು ನಿರ್ದೇಶಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅದರಲ್ಲಿ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.
https://www.instagram.com/p/BmAbOBSA127/?taken-by=rachita_ram