ಬೆಂಗಳೂರು: ನಗರದ ಲಲಿತ್ ಅಶೋಕ್ ಹೊಟೇಲಿನಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಜೊತೆ ಒಂದು ವರ್ಷ ರೂಂ ಬುಕ್ ಮಾಡಿ ಹೊಟೇಲಿಗೆ ಪಂಗನಾಮ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಳೆಹುಡುಗಿ ಪೂಜಾಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾವುದೇ ಹೋಟೆಲ್ ನ ಬಾಕಿ ಉಳಿಸಿಕೊಂಡಿಲ್ಲ, ಪಾವತಿಸಬೇಕಾಗಿಯೂ ಇಲ್ಲ. ಅಷ್ಟಕ್ಕೂ ನಾನ್ಯಾಕೆ ಹೋಟೆಲ್ಗೆ ಹೋಗಲಿ. ಹೋಗೋ ಅಗತ್ಯನೂ ನನಗಿಲ್ಲ ಎಂದು ತನ್ನ ಮೇಲಾದ ಎನ್ಸಿಆರ್ ಅನ್ನು ಅಲ್ಲಗೆಳೆದಿದ್ದಾರೆ.
Advertisement
Advertisement
ನನ್ನ ಸಿನಿಮಾ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ 2 ವರ್ಷ ನನ್ನ ಸಹಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಅವರು ಅಶೋಕ ಹೊಟೇಲಿನಲ್ಲಿ ಉಳಿದುಕೊಂಡಿದ್ದರು. ಆದ್ರೆ ನಾನು ರೂಂ ಬುಕ್ ಮಾಡಿ ಯಾರ ಜೊತೆಗೆ ಇದ್ದೆ ಎನ್ನುವುದು ಸುಳ್ಳು. ನಾವಿಬ್ಬರು ಒಂದು ವರ್ಷ ರೂಂ ಬುಕ್ ಮಾಡಿ ಜೊತೆಗಿದ್ದೆವು ಎನ್ನುವುದಕ್ಕೆ ನಿಮ್ಮಲ್ಲಿ ಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
Advertisement
ಆ ಸಮಯದ ಹಣ ಯಾವುದೇ ಬಾಕಿ ಉಳಿಸಿಕೊಂಡಿಲ್ಲ. ಎಲ್ಲವೂ ಚುಕ್ತಾ ಆಗಿದೆ. ಬೇಕಿದ್ರೆ ಹೋಟಿಲಿನ ನ ಜನರಲ್ ಮ್ಯಾನೇಜರ್ ಅವರನ್ನೇ ಕೇಳಿ ಎಂದು ಗರಂ ಆದ್ರು. ಇದನ್ನೂ ಓದಿ: ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!
Advertisement
ಇಂದಿನವರೆಗೂ ಕಾಫಿ ಕುಡಿಯಲು ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋಗುತ್ತಾ ಇರುತ್ತೇನೆ. ನಾನು ನನ್ನ ಕುಟುಂಬ, ಅಮ್ಮನ ಜೊತೆ ವಾಸವಾಗಿದ್ದೇನೆ. ಹೀಗಾಗಿ ನಾನು ಯಾಕೆ ಹೋಟೆಲ್ಗೆ ಹೋಗಿ ನೆಲೆಸಲಿ ಎಂದು ಹೇಳಿದ್ರು. ಈ ದೂರು ಎಲ್ಲಿಂದ ಬಂದಿದೆ ಎಂದು ನನಗೆ ಗೊತ್ತಿಲ್ಲ. ನನಗೆ ಬಂದೂ ಇಲ್ಲ ಎಂದು ತಿಳಿಸಿದ್ರು.
ಹಣ ಸಂದಾಯವಾಗಿದೆ: ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಅಶೋಕ್ ಹೋಟೆಲ್ ಸ್ಪಷ್ಟನೆ ನೀಡಿ, ಪೂಜಾ ಗಾಂಧಿಯವರು ಪಾವತಿಸಬೇಕಿದ್ದ ಹಣ ಪಾವತಿಯಾಗಿದೆ. ದೂರು ಯಾರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿದೆ.