ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ನಟಿ ಮೇಘನಾ ರಾಜ್ ಅವರದ್ದೇ ಸುದ್ದಿ. ಎರಡನೇ ಮದುವೆಯ ವದಂತಿಯಗೆ ನಟ ಮೇಘನಾ ರಾಜ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಆ ಒಂದು ಹೆಸರಿನ ಟ್ಯಾಟೂನಿಂದ ಎರಡನೇ ಮದುವೆಯ ವದಂತಿಗೆ ಮೇಘನಾ ರಾಜ್ ಇದೀಗ ಫುಲ್ ಸ್ಟಾಪ್ ಹಾಕಿದ್ದಾರೆ.
ಕಳೆದ ಕೆಲವು ದಿನಗಳಿಂದ ಮೇಘನಾ ರಾಜ್ ಎರಡನೇ ಮದುವೆಯ ಸುದ್ದಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಚಿರಂಜೀವಿ ಅವರ ಅಗಲಿಕೆಯ ನೆನಪಿನಲ್ಲೇ ಜೀವಿಸುತ್ತಿರುವ ನಟಿ ಮೇಘನಾ ಇದೀಗ ಎರಡನೇ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ್ದರು. ಎರಡನೇ ಮದುವೆ ಬಗ್ಗೆ ತಾವು ಇವರೆಗೂ ಯೋಚಿಸಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಮರು ಮದುವೆಯ ಬಗ್ಗೆ ತಮ್ಮ ನಿಲುವು ಎನು ಎಂಬುದನ್ನ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಅಕ್ಷತಾ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಸೋನು ಫುಲ್ ಗರಂ
View this post on Instagram
ನಟಿ ಮೇಘನಾ ತಮ್ಮ ಕೈ ಮೇಲೆ, ಚಿರು ಮತ್ತು ರಾಯನ್ ಎಂದು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಜತೆಗೆ ಎಂದೆಂದಿಗೂ ಎಂದು ಫೋಟೋಗೆ ನಟಿ ಅಡಿಬರಹ ನೀಡಿದ್ದಾರೆ. ಈ ಮೂಲಕ ʻನನ್ನ ಜಗತ್ತೇ ಚಿರು ಮತ್ತು ಪುತ್ರ ರಾಯನ್ ಅಷ್ಟೇʼ ಎಂಬುದನ್ನ ಮೇಘನಾ ಫೋಟೋನಿಂದ ಸ್ಟಷ್ಟನೆ ನೀಡಿದ್ದಾರೆ. ಮರು ಮದುವೆಯ ವದಂತಿಗೆ ಈ ಮೂಲಕ ನಟಿ ಬ್ರೇಕ್ ಹಾಕಿದ್ದಾರೆ.