ಮಗನಿಗೆ 6 ತಿಂಗಳು ತುಂಬಿರೋ ಸಂಭ್ರಮ- ಮುಯೂರಿ ಫೋಟೋಶೂಟ್

Public TV
1 Min Read
mayuri

ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಯೂರಿಯ ಮುದ್ದು ಕಂದ ಆರವ್‍ಗೆ 6 ತಿಂಗಳು ತುಂಬಿರುವ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಳ್ಳೆಯದರೊಂದಿಗೆ ಒಳ್ಳೆಯ ಕೊನೆಗೊಳ್ಳುತ್ತದೆ. ಆರವ್‍ಗೆ 6 ತಿಂಗಳು ಎಂದು ಬರೆದುಕೊಂಡು ತಮ್ಮ ಮಗನಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕೇಕ್ ಕತ್ತರಿಸಿ, ಮಗ ಹಾಗೂ ಗಂಡನ ಜೊತೆ ಫೋಟೋಶೂಟ್‍ಗೆ ಪೋಸ್ ಕೊಟ್ಟಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಇಲಿ ವಿಷದಿಂದ ಹಲ್ಲುಜ್ಜಿ ಪ್ರಾಣ ಬಿಟ್ಟ 18ರ ಯವತಿ

 

View this post on Instagram

 

A post shared by mayuri (@mayurikyatari)

ಮಗುವಾದಾಗಿನಿಂದ ಅಭಿನಯದಿಂದ ಬ್ರೇಕ್ ತೆಗೆದುಕೊಂಡಿರುವ ಮಯೂರಿ ಅವರು ಈಗ ಮಗುವಿನ ಆರೈಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮಯೂರಿ ಅವರಿಗೆ ಮಗುವಾಗಿ 6 ತಿಂಗಳು ಕಳೆದಿದೆ. ಮಗನಿಗೆ ಆರವ್ ಎಂದು ನಾಮಕರಣ ಮಾಡಿರುವ ಮಯೂರಿ ಹಾಗೂ ಅರುಣ್ ದಂಪತಿ ಮಗನ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

 

View this post on Instagram

 

A post shared by mayuri (@mayurikyatari)

ಬಹಳ ಸಮಯದಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳೆಯ ಅರುಣ್ ಅವರನ್ನು ಮಯೂರಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಮದುವೆಯಾದರು. ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇವರ ಮದುವೆ ನಡೆದಿತ್ತು. ಲಾಕ್‍ಡೌನ್ ಸಮಯದಲ್ಲಿ ಇವರ ಮದುವೆಯಾಗಿದ್ದರಿಂದ ಕೇವಲ ಕುಟುಂಬಸ್ಥರು, ಸ್ನೇಹಿತರು ಮತ್ತು ಕೆಲವೇ ಮಂದಿ ಆಪ್ತರ ಭಾಗಿಯಾಗಿದ್ದರು. ಮಯೂರಿ ತಮ್ಮ ಮಗುವಿನ ಮುದ್ದಾದ ವೀಡಿಯೋಗಳನ್ನು ಹಂಚಿಕೊಳ್ಳುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *