ಪ್ರಿಯಕರನೊಂದಿಗೆ ಸ್ಯಾಂಡಲ್‍ವುಡ್ ನಟಿ ನಿಶ್ಚಿತಾರ್ಥ

Public TV
1 Min Read
archana 1

ಬೆಂಗಳೂರು: ಸ್ಯಾಂಡಲ್‍ವುಡ್‍ನ ‘ಆ ದಿನಗಳು’ ಸಿನಿಮಾ ನಟಿ ಅರ್ಚನಾ ವೇದಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದು, ತಮ್ಮ ಗೆಳೆಯನ ಜೊತೆಗೆ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅರ್ಚನಾ ಅವರು ಜಗದೀಶ್ ಎಂಬವರನ್ನು ಪ್ರೀತಿಸುತ್ತಿದ್ದರು. ಇವರು ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು. ನಂತರ ಎರಡೂ ಕುಟುಂಬವು ಒಪ್ಪಿ ಅರ್ಚನಾ ಮತ್ತು ಜಗದೀಶ್ ನಿಶ್ಚಿತಾರ್ಥವನ್ನು ಹೈದರಾಬಾದಿನ ರಾಡಿಸನ್ ಹೋಟೆಲಿನಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ.

archana

ಗುರು-ಹಿರಿಯರು ನಿಶ್ಚಯ ಮಾಡಿದ್ದ ಮುಹೂರ್ತದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಅರ್ಚನಾ ಹಾಗೂ ಜಗದೀಶ್ ಎಂಗೇಜ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಬಂದು ಶುಭಾಶಯ ತಿಳಿಸಿದ್ದಾರೆ. ತಮ್ಮ ಫೇಸ್‍ಬುಕ್ ಪೇಜಿನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಅರ್ಚನಾ ಅವರು ತಮ್ಮ ಮದುವೆ ದಿನಾಂಕವನ್ನು ಮಾತ್ರ ಇದುವರೆಗೂ ಬಹಿರಂಗಪಡಿಸಿಲ್ಲ.

ನಟಿ ಅರ್ಚನಾ ಕನ್ನಡದಲ್ಲಿ ‘ಮೈತ್ರಿ’ ‘ಮಿಂಚು’ ಮತ್ತು ‘ಮೇಘ ವರ್ಷಿಣಿ’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅಲ್ಲದೇ ತೆಲುಗಿನ ಬಿಗ್ ಬಾಸ್ ಸೀಸನ್ ಒಂದರಲ್ಲೂ ಅರ್ಚನಾ ಪಾಲ್ಗೊಂಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *