ಬೆಂಗಳೂರು: ಟ್ರೋಲಿಗರ ವಿರುದ್ಧವಾಗಿ ಸ್ಯಾಂಡಲ್‍ವುಡ್ ನಟಿ ಅನಿತಾ ಭಟ್ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ನಟಿ ಮಾಡುವ ಟ್ವೀಟ್‍ಗೆ ಬ್ಯಾಡ್ ಕಮೆಂಟ್ ಮತ್ತು ಟ್ರೋಲ್ ಮಾಡುವ ಹಲವರ ವಿರುದ್ಧವಾಗಿ ಸೈಬರ್ ಕ್ರೈಂಗೆ ನಟಿ ದೂರು ನೀಡಿದ್ದಾರೆ. ಟ್ರೋಲರ್ಸ್ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಅದರಲ್ಲೂ ನಟಿಯರು ಅಂದ್ರೆ ಟಾರ್ಗೆಟ್ ಮಾಡುತ್ತಾರೆ. ಈ ಬಗ್ಗೆ ಅನಿತಾ ಭಟ್ ಯಲಹಂಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಈ ಕುರಿತಾಗಿ ಕಂಪ್ಲೆಂಟ್ ಕಾಫಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Complaint lodged
ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದು. ವೈಯಕ್ತಿಕ ನಿಂದನೆ, ದಾಳಿ ಮಾಡುವ ವೇದಿಕೆ ಅಲ್ಲ. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರಾದಾಗ ಬೇರೆಯವರಿಗೆ ಮಾತನಾಡುವ ಹಕ್ಕಿಲ್ಲ. One red mark on your profile and your life is spoiled. Take care and be safe. Thanks to @CybercrimeCID pic.twitter.com/wq7L0OBnXN
— Anita Bhat (@IamAnitaBhat) September 1, 2021
ಏನಿದೆ?
ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ anitha bhat ಎಂಬ ಖಾತೆಯನ್ನು ಹೊಂದಿದ್ದು, ಸದರಿ ಖಾತೆಯಿಂದ ಹಲವು ಟ್ವೀಟ್ ಗಳನ್ನು ಮಾಡಲಾಗಿದೆ. ಟ್ವೀಟ್‍ಗಳಿಗೆ ಯಾರೋ ಅಪರಿಚಿತ ಅಸಾಮಿ ಕೆಟ್ಟದಾಗಿ ಟ್ವೀಟ್ ಮಾಡುತ್ತಿದ್ದು, ಈ ರೀತಿಯಾಗಿ ಮಾಡುತ್ತಿರುವ ಸದರ ಆಸಾಮಿಯನ್ನು ಪತ್ತೆ ಮಾಡಿ ಠಾಣೆಗೆ ಕರೆಯಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಇನ್ನೊಮಮ್ಮೆ ಹೀಗೆ ಮಾಡದ ಹಾಗೆ ಬಂದೋಬಸ್ತ್ ಮಾಡಿಕೊಡಬೇಕೆಂದು ದೂರಿನಲ್ಲಿದೆ. ಇದನ್ನೂ ಓದಿ: ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್
ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಅಂತ ಗೊತ್ತಿದ್ರೂ, ಅದನ್ನ ಮಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ. https://t.co/ifOYhMpCsh
— Anita Bhat (@IamAnitaBhat) August 17, 2021
ಈ ಹಿಂದೆ ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇವಿ ಸೇವೆಗೆ ದುಬಾರಿ ಶುಲ್ಕ-ಭಕ್ತರ ಆಕ್ರೋಶ
Educated people could take proper steps towards this Sir. ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ದತಿಯನ್ನ ದೂರ ಇಟ್ಟಿದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ. https://t.co/1WWj5bIBXV
— Anita Bhat (@IamAnitaBhat) August 17, 2021
ನಟಿ ಮುಂದುವರಿದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮೀನುಗಾರ
ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದಿನ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ
— Anita Bhat (@IamAnitaBhat) August 17, 2021
ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದರು. ಇದೀಗ ಟ್ರೋಲ್ ಮಾಡುವ ಮತ್ತು ಕೆಟ್ಟದಾಗಿ ಕಮೆಂಟ್ ಮಾಡುವರ ವಿರುದ್ಧ ದೂರು ದಾಖಲಿಸಿದ್ದಾರೆ.