ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾವಿರಾರು ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಸ್ಯಾಂಡಲ್‍ವುಡ್ ನಟರು ಕೂಡ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷಕ್ಕೆ ನಟ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ “ನೀವು ಎಲ್ಲರೂ ಸೆಲೆಬ್ರೇಶನ್ ಮೂಡಿಗೆ ಹೋಗುವ ಮೊದಲು ನಿಮ್ಮ ಆತ್ಮೀಯರ ಬಳಿ ಹೋಗಿ ಕ್ಷೇಮವಾಗಿ ಆಚರಿಸಿ. ಈ ಹೊಸ ವರ್ಷ ಎಲ್ಲರಿಗೂ ಸ್ಪಿರಿಟ್ ಸಿಗಲಿ. ಎಲ್ಲರಿಗೂ ಹಾಗೂ ಕನ್ನಡ ಚಿತ್ರರಂಗದವರಿಗೂ ನನ್ನ ಕಡೆಯಿಂದ ಹೊಸ ವರ್ಷದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.
Advertisement
Before u all get into the celebrations mood,,, please ensure u r safe n the nearer n dearer ones r safer.
Let's bring in th new year wth great spirits, than jus spirits ???? ????.
Mch mch luv to each one of u, n to my entire KFI family. ????????
Happy 2019.???? pic.twitter.com/ZWXakiQ6BF
— Kichcha Sudeepa (@KicchaSudeep) December 31, 2018
Advertisement
ಮತ್ತೊಂದು ಟ್ವೀಟ್‍ನಲ್ಲಿ ಕಿಚ್ಚ ಸುದೀಪ್, “2018ರಲ್ಲಿ ನನಗೆ ಪ್ರೀತಿ ತೋರಿಸಿ ಪ್ರೋತ್ಸಾಹಿಸಿದ ಎಲ್ಲ ನನ್ನ ಸ್ನೇಹಿತರಿಗೆ, ಕುಟುಂಬಸ್ಥರಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಜನವರಿ 31ರಂದು ನಾನು ಚಿತ್ರರಂಗಕ್ಕೆ ಬಂದು 23 ವರ್ಷಗಳಾಗುತ್ತದೆ. ನೀವು ನನ್ನ ಮೇಲೆಯಿಟ್ಟ ವಿಶ್ವಾಸದಿಂದ ನನ್ನ ಈ ಪ್ರಯಾಣ ನಡೆಯಿತು. ಎಲ್ಲರಿಗೂ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.
Advertisement
Wanna Thank all my frnz,family n media for all the love showered n for the support u all have given me through 2018.Come Jan 31st n It'l be 23yrs into films.This's only coz of the confidence u all have given me through my journey n for making me feel wanted.
Thank u n mch luv????????
— Kichcha Sudeepa (@KicchaSudeep) December 31, 2018
Advertisement
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಯಜಮಾನ ಚಿತ್ರದ ಪೋಸ್ಟರ್ ಹಾಕಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ದರ್ಶನ್ ತಮ್ಮ ಟ್ವಿಟ್ಟರಿನಲ್ಲಿ, “ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸ ಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ದಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷವೂ ನಿಮ್ಮ ಬಾಳಲ್ಲಿ ಹೊಸಬೆಳಕು ಮೂಡಿಸಿ ಸುಂದರ ಭವಿಷ್ಯದೆಡೆಗೆ ನಿಮ್ಮನ್ನು ಕರೆದೊಯ್ಯಲಿ. ನಾಡಿನ ಸಮಸ್ತ ಜನತೆಗೆ ನಿಮ್ಮ ದಾಸ ದರ್ಶನ್ ಕಡೆಯಿಂದ ಹೊಸ ಹುರುಪಿನಿಂದ ಕೂಡಿರುವ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ???? #Yajamana pic.twitter.com/AVttXyNFAT
— Darshan Thoogudeepa (@dasadarshan) January 1, 2019
ನವರಸನಾಯಕ ಜಗ್ಗೇಶ್ ಅವರು ತಮ್ಮ ಕುಟುಂಬದ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ನನ್ನ ಕುಟುಂಬದಿಂದ ಆತ್ಮೀಯ ಕನ್ನಡದ ಬಂಧುಗಳಿಗೆ ಹೊಸ ವರ್ಷದ ಶುಭಾಶಯಗಳು. 2018ರ ಕಹಿ ನೆನಪು ಮರೆತು 2019ರ ಹೊಸ ವರ್ಷದ ಹೊಸತನಕ್ಕೆ ಯತ್ನಿಸಿ. ಮನುಜನ್ಮ ಶ್ರೇಷ್ಟ ನಗುತ್ತಾ ನಗಿಸುತ್ತಾ ನೆನಪಲ್ಲಿ ಉಳಿಯುವಂತೆ ಬಾಳಿ. ನನ್ನ ಬೆಳಸಿದ ಕನ್ನಡಕುಲಕೋಟಿ, ಮಾಧ್ಯಮಮಿತ್ರರಿಗೆ, ಬಂಧುಗಳಿಗೆ ಹೃದಯದ ಅಂತರಾಳದಿಂದ ಕೂಗಿ ಹೇಳುವೆ ಐ ಲವ್ ಯೂ ಆಲ್” ಎಂದು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನನ್ನಕುಟುಂಬದಿಂದ ಆತ್ಮೀಯ ಕನ್ನಡದ ಬಂಧುಗಳಿಗೆ ಹೊಸವರ್ಷದ ಶುಭಾಶಯಗಳು.2018ರ ಕಹಿನೆನಪು ಮರೆತು 2019ರ ಹೊಸವರ್ಷದ ಹೊಸತನಕ್ಕೆ ಯತ್ನಿಸಿ..ಮನುಜನ್ಮ ಶ್ರೇಷ್ಟ ನಗುತ್ತಾ ನಗಿಸುತ್ತಾ ನೆನಪಲ್ಲಿ ಉಳಿಯುವಂತೆ ಬಾಳಿ..ನನ್ನ ಬೆಳಸಿದ #ಕನ್ನಡಕುಲಕೋಟಿ #ಮಾಧ್ಯಮಮಿತ್ರರಿಗೆ #ಬಂಧುಗಳಿಗೆ
ಹೃದಯದ ಅಂತರಾಳದಿಂದ ಕೂಗಿ ಹೇಳುವೆ #iloveyouall #godbless pic.twitter.com/CWFlg6ZCW9
— ನವರಸನಾಯಕ ಜಗ್ಗೇಶ್ (@Jaggesh2) December 31, 2018
ನಟ ರಮೇಶ್ ಅರವಿಂದ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಹಾಕಿ ಅದಕ್ಕೆ, “ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನಿಮ್ಮ ಸಂಬಂಧಗಳಲ್ಲಿ, ನಿಮ್ಮ ಕೆಲಸಗಳಲ್ಲಿ, ನಿಮ್ಮ ಹಣಕಾಸಿನ ವಿಚಾರದಲ್ಲಿ, ನಿಮ್ಮ ಆರೋಗ್ಯದಲ್ಲಿ ಹಾಗೂ ಜೀವನದ ಎಲ್ಲ ಕಡೆಯಿಂದ ಈ ವರ್ಷ ನಿಮಗೆ ಚೆನ್ನಾಗಿರಲಿ ಹಾಗೂ ಯಾವಾಗಲೂ ಖುಷಿಯಾಗಿರಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು” ಎಂದು ವಿಡಿಯೋ ಮೂಲಕ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
Wishing You a Splendid New Year.. pic.twitter.com/lNfiuzxPjF
— Ramesh Aravind (@Ramesh_aravind) December 31, 2018
ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ ‘ಗೀತಾ’ ಚಿತ್ರದ ಎರಡು ಪೋಸ್ಟರ್ ಹಾಕಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಇತ್ತ ನಟ ಶ್ರೀಮುರಳಿ ಟ್ವಿಟ್ಟರಿನಲ್ಲಿ ತಮ್ಮ ಫೋಟೋ ಹಾಕಿ, “2018 ಮುಗಿದಿದೆ. ಈಗ ಪಾರ್ಟಿ ಟೈಂ. ಎಲ್ಲರಿಗೂ ಮನೆಗೆ ಹೋಗುವಾಗ ಸುರಕ್ಷಿತವಾಗಿ ವಾಹನವನ್ನು ಚಲಾಯಿಸಿ. ಕ್ಷೇಮವಾಗಿರಿ. ಖುಷಿಯಿಂದ 2019ರನ್ನು ವೆಲಕಂ ಮಾಡಿ” ಎಂದು ಟ್ವೀಟ್ ಮಾಡಿದ್ದಾರೆ.
Happy new year ????,From #Geetha team ???????????? pic.twitter.com/TnIJNJxrQg
— Ganesh (@Official_Ganesh) January 1, 2019
2018 is Over… Ma Tweepl I’m sure it’s party time… have fun but pls Drive back to your respective homes… Safely! Welcome 2019 happily ????????????tc all! pic.twitter.com/Vx7jPNRjhs
— #SRIIMURALI (@SRIMURALIII) December 31, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv