ಇಬ್ಬರು ಮಕ್ಕಳ ಫೋಟೋ ಹಂಚಿಕೊಂಡ ರಾಧಿಕಾ

Public TV
2 Min Read
radhika pandit ajay rao

-ಸಿಂಹಿಣಿಯಂತೆ ಗರ್ಜಿಸಿದ ಅಜಯ್ ಪುತ್ರಿ

ಬೆಂಗಳೂರು: ಇಂದು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಕಲಾವಿದರು ತಮ್ಮ ಮಕ್ಕಳ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ನಟಿ ರಾಧಿಕಾ ಪಂಡಿತ್ ಹಾಗೂ ನಟ ಅಜಯ್ ರಾವ್ ತಮ್ಮ ಮುದ್ದು ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮಕ್ಕಳ ದಿನಾಚರಣೆ ವಿಶೇಷವಾಗಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾದಲ್ಲಿ ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭಕೋರಿದ್ದಾರೆ. ಈ ಫೋಟೋದಲ್ಲಿ ಕಾಣುವ ಇಬ್ಬರು ನನ್ನ ಮೊದಲ ಮಕ್ಕಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನಟ ಯಶ್ ತಮ್ಮ ಪುತ್ರಿ ಐರಾ ಜೊತೆ ಆಟವಾಡುತ್ತಿದ್ದಾರೆ.

 

View this post on Instagram

 

Happy children’s day to all.. ???? Featuring in the pic are my first two kids!! ???? #radhikapandit #nimmaRP

A post shared by Radhika Pandit (@iamradhikapandit) on

ಇತ್ತ ಕೃಷ್ಣ ಅಜಯ್ ರಾವ್ ಅವರು ಕೂಡ ತಮ್ಮ ಮಗಳು ಸಿಂಹಿಣಿಯಂತೆ ಗರ್ಜಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ಅಜಯ್ ಅದಕ್ಕೆ, “ಚೆರಿಷ್ಮಾ. ಈ ಭೂಮಿಯ ಮುದ್ದಾದ ಸಿಂಹಿಣಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಹಲವು ಕಲಾವಿದರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಮಕ್ಕಳ ದಿನಾಚರಣೆಯ ಶುಭ ಕೋರಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಕೂಡ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಮಕ್ಕಳ ನಗು ಅತ್ಯಂತ ಸುಂದರ ಧ್ವನಿ ಎಂದು ಬರೆದುಕೊಂಡಿದ್ದಾರೆ. ಇತ್ತ ನಟಿ ಸಂಯುಕ್ತ ಹೊರನಾಡು ಅವರು ಮಕ್ಕಳೊಂದಿಗೆ ಸಂತಸದಿಂದಿರುವ ವಿಡಿಯೋವನ್ನು ಇನ್‍ಸ್ಟಾದಲ್ಲಿ ಹಾಕಿ ಶುಭಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *