ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ವರ್ಷದ ಮೊದಲ ಹಬ್ಬ ಇದಾಗಿದ್ದು, ಎಲ್ಲೆಡೆ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದೀಗ ಸ್ಯಾಂಡಲ್‌ವುಲ್‌ನಲ್ಲೂ (Sandalwood) ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳು ಸಂಕ್ರಾಂತಿ ಹಬ್ಬವನ್ನು ಸಡಗರಿದಿಂದ ಆಚರಿಸಿದ್ದಾರೆ.
View this post on Instagram
Advertisement
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಮನೆಯಲ್ಲಿ ಸಂಕ್ರಾಂತಿ ಹಬ್ಬ ಜೋರಾಗಿದೆ. ಕುಂದಾಪುರದಲ್ಲಿ ಕುಟುಂಬದೊಂದಿಗೆ ಅದ್ಧೂರಿಯಾಗಿ ರಿಷಬ್ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಹಾಕಿ ಹಬ್ಬದ ಆಚರಣೆಯ ಫೋಟೋವನ್ನು ನಟ ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ನಟಿ ಶ್ವೇತಾ ಶ್ರೀವಾಸ್ತವ್ ಅವರು ಮಗಳೊಂದಿಗೆ ಕಾರ್ಕಳದಲ್ಲಿ ಹಬ್ಬ ಆಚರಿಸಿದ್ದಾರೆ. ನನ್ನ ಅಜ್ಜನ ಊರು ಕಾರ್ಕಳ. ಸುಗ್ಗಿ ಸಂಭ್ರಮ ಶುರುವಾಗಿದೆ. ನಿಮ್ಮ ಪ್ರಯತ್ನಗಳೆಲ್ಲವೂ ಫಲ ಕೊಡಲಿ. ಯಶಸ್ಸು ಹಾಗೂ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Advertisement
View this post on Instagram
‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಅವರು ‘ನಿನಗಾಗಿ’ ಸೀರಿಯಲ್ ಸೆಟ್‌ನಲ್ಲಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.
ಇನ್ನೂ ಧ್ರುವ ಸರ್ಜಾ ಫಾರಂ ಹೌಸ್‌ನಲ್ಲಿ ‘ಕೆಡಿ’ ಚಿತ್ರತಂಡ ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಡೈರೆಕ್ಟರ್ ಪ್ರೇಮ್, ರೀಷ್ಮಾ ನಾಣಯ್ಯ (Reeshma Nanaiah) ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಗೋವಿಗೆ ಪೂಜೆ ಮಾಡಿಸಿದ್ದಾರೆ.