Connect with us

Bengaluru City

ಲುಂಗಿ, ಹವಾಯಿ ಚಪ್ಪಲಿ, ಮಂಕಿಕ್ಯಾಪ್ ಹಾಕ್ಕೊಂಡು ‘ಕೆಜಿಎಫ್’ ನೋಡಿದ ಸ್ಯಾಂಡಲ್‍ವುಡ್ ಟಾಪ್ ನಟ

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಜಿಎಫ್’ ಸಿನಿಮಾ ಭಾರತದಾದ್ಯಂತ ಎಲ್ಲೆಡೆ ಹವಾ ಕ್ರಿಯೆಟ್ ಮಾಡಿದ್ದು, ಸಿನಿತಾರೆಯರು ಸೇರಿದಂತೆ ಅಭಿನಿಮಾನಿಗಳಿಂದ ಅಪಾರ ಮೆಚ್ಚುಗೆ ಪಡೆಯುತ್ತಿದೆ. ಅಭಿಮಾನಿಗಳ ರೀತಿ ಎಂಜಾಯ್ ಮಾಡಿಕೊಂಡು ಸಿನಿಮಾ ನೋಡಲು ಸ್ಯಾಂಡಲ್‍ವುಡ್ ನಟ ಲುಂಗಿ, ಹವಾಯಿ ಚಪ್ಪಲಿ ಧರಿಸಿಕೊಂಡು ಸಿನಿಮಾ ನೋಡಿದ್ದಾರೆ.

ನಟ ಜಗ್ಗೇಶ್ ಅವರು ಲುಂಗಿ, ಹವಾಯಿ ಚಪ್ಪಲಿ ಮತ್ತು ಮಂಕಿ ಕ್ಯಾಪ್ ಧರಿಸಿಕೊಂಡು ಚಿತ್ರಮಂದಿರಕ್ಕೆ ಹೋಗಿ ಯಾರಿಗೂ ಗುರುತು ಸಿಗದಂತೆ ‘ಕೆಜಿಎಫ್’ ಚಿತ್ರ ನೋಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನೂರು ಕಾಲ ಕಲಾಸೇವೆಯ ಯೋಗ ಲಭಿಸಲಿ- ಯಶ್‍ಗೆ ಜಗ್ಗೇಶ್ ವಿಶ್

ಜಗ್ಗೇಶ್ ಅವರು, “ಲುಂಗಿ, ಹವಾಯ್ ಚಪ್ಪಲಿ ಮತ್ತು ಮಂಕಿಕ್ಯಾಪ್ ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್‍ಗೆ ಹೋಗಿ ಕೆಜಿಎಫ್ ನೋಡಿದೆ. 38 ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದೆ. ಸಾಮಾನ್ಯ ಜೀವನ ಎಂಜಾಯ್ ಮಾಡಲು ಹಾಗೆ ಹೋದದ್ದು. ಸಿನಿಮಾ ಇಂಟರ್ ವಲ್‍ನಲ್ಲಿ ಕಾರಾಪುರಿ ತಿಂದು, ಟೀ ಕುಡಿದೆ ಮಜ ನೀಡಿತು. ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ. ಕಾರಣ ಏಕಾಂತವಾಗಿ ಸಂತೋಷದಿಂದ ಇರಲು ಈ ರೀತಿಯಾಗಿ ಮಾಡಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಕೂಡ ಜಗ್ಗೇಶ್ ಅವರು, ನಲ್ಮೆಯ ಸಹೋದರ ಯಶ್ ನಿಮ್ಮ ಚಿತ್ರ KGF ಕನ್ನಡದ ಕಂಪನ್ನು ವಿಶ್ವಮಟ್ಟದ ಕನ್ನಡಿಗರ ಮನಗಳನ್ನು ತಲುಪಲಿ. ಕನ್ನಡ ಚಿತ್ರರಂಗದ ನಗಾರಿ ಸದ್ದು ರಾಷ್ಟ್ರಕ್ಕೆ ಕೇಳಿಸಲಿ. ರಾಯರು ನಿಮ್ಮ ಮನೋವಾಂಛ ಫಲ ಸಿದ್ಧಿಸುವಂತೆ ಹರಸಲಿ.. ನೂರ್ಕಾಲ ಕಲಾಸೇವೆ ಮಾಡುವ ಯೋಗ ನಿಮಗೆ ಲಭಿಸಲಿ..Best of luck fr #Kgf.. ಅಂತ ಬರೆದುಕೊಂಡಿದ್ದರು.

https://twitter.com/Jaggesh2/status/1077586093254443010

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *