– 2 ವರ್ಷದ ಬಳಿಕ ಬೆಳ್ಳಿ ತೆರೆ ಮೇಲೆ ಶಿವಣ್ಣ
ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಇಂದು 375 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ವಿಶ್ವದಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭಜರಂಗಿ ಹವಾ ಕ್ರಿಯೆಟ್ ಮಾಡಲಿದೆ.
ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 5 ಗಂಟೆಗೆ ಅಭಿಮಾನಿಗಳಿಗಾಗಿ ವಿಶೇಷ ಶೋ ಆಯೋಜನೆ ಮಾಡಲಾಗಿತ್ತು. ಮೊದಲ ಶೋ ಗಾಗಿ ತುದಿಗಾಲಲ್ಲಿ ಅಭಿಮಾನಿಗಳು ನಿಂತಿದ್ದರು. ತೆರೆ ಮೇಲೆ ಶಿವಣ್ಣನನ್ನ ನೋಡುತಿದ್ದಂತೆ ಹುಚ್ಚೆದ್ದು ಕುಣಿದ ಅಭಿಮಾನಿಗಳು, ಸ್ಕ್ರೀನ್ ಮುಂದೆ ಹೂ ಎರಚಿ ಸಂಭ್ರಮಿಸಿದರು. ಅಲ್ಲದೆ ಶೋ ಆರಂಭಕ್ಕೂ ಮುನ್ನ ಪಟಾಕಿ ಹೊಡೆದು, ಶಿವರಾಜ್ ಕುಮಾರ್ ಕಟೌಟ್ ಗೆ ಹಾಲಿನ ಅಭಿಷೇಕ, ಪೂಜೆ ಸಲ್ಲಿಸಿದರು.
ಇತ್ತ ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿಯಲ್ಲಿಯೂ ಶೋ ಆರಂಭವಾಗಿದೆ. ಬೆಂಗಳೂರಿನ ಗೌಡನ ಪಾಳ್ಯ ಶ್ರೀನಿವಾಸ ಥಿಯೇಟರ್ ನಲ್ಲಿ ಬೆಳಿಗ್ಗೆಯೇ ಸಿನಿಮಾ ಆರಂಭ ಆಗಿದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10 ಗಂಟೆಗೆ ಶೋ ಆರಂಭ ಆಗಲಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು
ಜಯಣ್ಣ-ಭೋಗಣ್ಣ ನಿರ್ಮಾಣದ ಎ ಹರ್ಷ ನಿರ್ದೇಶನದ ಹಾಗೂ ಹರ್ಷ ಶಿವರಾಜ್ ಕುಮಾರ್ ಕಾಂಬೀನೇಷನ್ ಚಿತ್ರದಲ್ಲಿ ಚಿತ್ರದಲ್ಲಿ ಬಹುಭಾಷಾ ನಟಿ ಭಾವನ, ಹಿರಿಯ ನಟಿ ಶೃತಿ, ಸೌರವ್ ಲೋಕೇಶ್, ಶಿವರಾಜ್ ಕೆ ಆರ್ ಪೇಟೆ ತಾರಬಳಗವಿದೆ.