ಬದಲಾಗಲಿದೆ ಸತೀಶ್ ನೀನಾಸಂ ನಟನೆಯ `ಗೋದ್ರಾ’ ಟೈಟಲ್!

Public TV
1 Min Read
godra

ನ್ನಡ ಸಿನಿಮಾರಂಗದಲ್ಲಿ ಮನೋಜ್ಞ ನಟನೆ ಮತ್ತು ವಿಶಿಷ್ಠ ವ್ಯಕ್ತಿತ್ವದಿಂದ ಮನೆಮಾತಾಗಿರೋ ಸತೀಶ್ ನೀನಾಸಂ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಆದರೆ ಈಗ ಸತೀಶ್ ನಟನೆಯ ʻಗೋದ್ರಾʼ ಚಿತ್ರ ಟೈಟಲ್ ಚೇಂಜ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

satish 1 1

ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ `ಗೋದ್ರಾ’ ಚಿತ್ರಕ್ಕೆ ಕೆ.ಎಸ್ ನಂದೀಶ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ರಿಲೀಸ್ ರೆಡಿಯಿದ್ದು, ಇದೀಗ ಚಿತ್ರದ ಟೈಟಲ್‌ ಬದಲಾವಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಈ ಹಿಂದೆಯೇ 2020ರಲ್ಲೇ ಟೈಟಲ್ ಕೈಬಿಡುವಂತೆ ಹೇಳಿತ್ತು ಸೆನ್ಸಾರ್ ಮಂಡಳಿ.

satish 1

ಈ ಹಿಂದೆ 2002ರಲ್ಲಿ ದೇಶದೆಲ್ಲಡೆ ಸದ್ದು ಮಾಡಿದ್ದ ಗೋದ್ರಾ ಹತ್ಯಾಕಾಂಡ ಸಂಚಲನ ಮೂಡಿಸಿತ್ತು. ಆದರೆ ಇದಕ್ಕೂ ಚಿತ್ರ ಕಥೆಗೂ ಯಾವುದೇ ಸಂಬಂಧವಿಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಹಿನ್ನಲೆ ಸೆನ್ಸಾರ್ ಮಂಡಳಿ 2020ರಲ್ಲೇ ಟೈಟಲ್ ಕೈಬಿಡುವಂತೆ ಹೇಳಿತ್ತು. ಅದನ್ನು ಚಿತ್ರತಂಡವು ಒಪ್ಪಿಕೊಂಡಿದ್ದು, ಚಿತ್ರಕ್ಕೆ ಪೂರಕವಾದ ಹೆಸರನ್ನೇ ಹುಡುಕುತ್ತಿದೆ. ರಿಲೀಸ್‌ಗೂ ಮುಂಚೆನೇ ಟೈಟಲ್ ಬದಲಾವಣೆಯೊಂದಿಗೆ ಸತೀಶ್ ನೀನಾಸಂ ನಟನೆಯ ಚಿತ್ರ ಬರಲಿದೆ. ಇದನ್ನೂ ಓದಿ: ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ

ಭಿನ್ನ ಕಥೆ ಜತೆ ಬರುತ್ತಿರೋ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್‌ರನ್ನ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

Share This Article