ಕನ್ನಡದ ನಟ ಟೈಗರ್ ಪ್ರಭಾಕರ್ ಆಪ್ತ ನಟ ಸರಿಗಮ ವಿಜಯ್‌ಗೆ (Sarigama Vijay) ಸರಿಗಮ (Sarigama) ಹೆಸರು ಸೇರಿಕೊಂಡಿದ್ದು ಹೇಗೆ? ಎಂಬುದರ ಹಿಂದೆ ಇಂಟ್ರರೆಸ್ಟಿಂಗ್ ವಿಚಾರವೊಂದಿದೆ. ವಿಜಯ್ ಕುಮಾರ್ ಆಗಿದ್ದ ಅವರು ‘ಸರಿಗಮ ವಿಜಿ’ ಆಗಿರೋದರ ಹಿಂದೆ ಕಥೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
Advertisement
1975ರಲ್ಲಿ ತೆರೆಕಂಡ ಗೀತಪ್ರಿಯ ನಿರ್ದೇಶನದ ‘ಬೆಳುವಲದ ಮಡಿಲಲ್ಲಿ’ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸರಿಗಮ ವಿಜಿ ನಟಿಸಿದ್ದಾರೆ. 2400ಕ್ಕೂ ಹೆಚ್ಚು ಸೀರಿಯಲ್ ಹಾಗೂ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
Advertisement
Advertisement
ಇನ್ನೂ ‘ಸಂಸಾರದಲ್ಲಿ ಸರಿಗಮ’ ಎಂಬ ನಾಟಕದಿಂದ ಸರಿಗಮ ಹೆಸರು ಅವರಿಗೆ ಬಂತು. ಈ ನಾಟಕ ಅವರಿಗೆ ಹೆಚ್ಚಿನ ಜನಪ್ರಿಯತೆ ನೀಡಿತ್ತು. ಈ ನಾಟಕ 1390ಕ್ಕೂ ಹೆಚ್ಚು ಬಾರಿ ಪ್ರದರ್ಶನ ಕಂಡಿತ್ತು. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಮತ್ತು ಮುಂಬೈನಲ್ಲಿ ಅವರ ಈ ನಾಟಕ ತಂಡ ಯಶಸ್ವಿ ಪ್ರದರ್ಶನ ನೀಡಿತ್ತು. ಅವರ ಹೆಸರಿನ ಜೊತೆ ‘ಸರಿಗಮ’ ಸೇರಿಕೊಂಡು ಅಲ್ಲಿಂದ ಅವರು ‘ಸರಿಗಮ ವಿಜಿ’ ಎಂದೇ ಫೇಮಸ್ ಆದರು.
Advertisement
ವಿಶೇಷ ಅಂದರೆ, ಇವರ ನಟನೆಯ ಚಿತ್ರಗಳ ಪಟ್ಟಿಯಲ್ಲಿ ಟೈಗರ್ ಪ್ರಭಾಕರ್ ಚಿತ್ರಗಳೇ ಹೆಚ್ಚಾಗಿದೆ. ಟೈಗರ್ ಪ್ರಭಾಕರ್‌ಗೆ ವಿಜಯ್ ಆಪ್ತರಾಗಿದ್ದರು. ಇನ್ನೂ ಸರಿಗಮ ವಿಜಿ ನಟಿಸಿದ ಕೊನೆಯದಾಗಿ ‘ಡಕೋಟಾ ಪಿಕ್ಚರ್’ ಚಿತ್ರದಲ್ಲಿ ನಟಿಸಿದ್ದರು.
ಇನ್ನೂ ಇಂದು ಬೆಳಗ್ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸರಿಗಮ ವಿಜಿ (76) ನಿಧನರಾಗಿದ್ದಾರೆ. ಇಂದು ನಟನ ನಿವಾಸ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ (ಜ.16) ಅಂತ್ಯಕ್ರಿಯೆ ನಡೆಯಲಿದೆ.