ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ದುಃಖದಿಂದ ಅವರ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಗಣ್ಯರು ಕೂಡ ಹೊರಬಂದಿಲ್ಲ. ಈ ಮಧ್ಯೆ ಅಪ್ಪು ನಿಧನರಾದ ಮರುದಿನವೇ ವಿದೇಶಿಗನೊಬ್ಬ ತನ್ನ ಯೂಟ್ಯೂಬ್ ನಲ್ಲಿ ವೀಡಿಯೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ನಟನ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ.
Advertisement
ಹೌದು. ಚಾರ್ಲಿ ಚಿಟ್ವೆಂಡೆನ್ ಪ್ಯಾರಾನಾರ್ಮಲ್ ಎಂಬಾತ ಪುನೀತ್ ಆತ್ಮದ ಜೊತೆ ಮಾತನಾಡಿದ್ದಾಗಿ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾನೆ. ಈ ವೀಡಿಯೋದಲ್ಲಿ ಚಾರ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಅಪ್ಪು ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾನೆ. ಅಲ್ಲದೆ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಕೇಳಿದಾಗ ಐ ಲವ್ ದೆಮ್ ಎಂದು ಆತ್ಮ ಹೇಳಿರುವುದಾಗಿ ಚಾರ್ಲಿ ವೀಡಿಯೋದಲ್ಲಿ ಬರೆದುಕೊಂಡಿದ್ದಾನೆ. ಹಾರ್ಟ್ ಫೇಲ್, ಡಾಕ್ಟರ್.. ಡಾಕ್ಟರ್ ಎಂದೆಲ್ಲ ಅಪ್ಪು ಹೇಳಿರುವುದಾಗಿ ಬಿಂಬಿಸಿದ್ದಾನೆ. ಈ ವೀಡಿಯೋ ನೀಡುತ್ತಿದ್ದಂತೆಯೇ ಅಪ್ಪು ಅಭಿಮಾನಿಗಳು ಚಾರ್ಲಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಅಪ್ಪು ಸಾವಿನಿಂದ ಲೋಕ ಕಾಣುವ ಕನಸು ಮರೆತ ಅಂಧ ಸಹೋದರಿಯರು
Advertisement
Advertisement
ಜನರ ಭಾವನೆಗಳ ಜೊತೆ ಆಟವಾಡಬೇಡ. ಅಪ್ಪು ಸರ್ ಅವರನ್ನು ಗೌರವಿಸಿ. ಅವರೊಬ್ಬ ಲೆಜೆಂಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ ಇನ್ನೊಬ್ಬರು, ಇಂತಹ ವೀಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ವೀಕ್ಷಕರನ್ನು ಮೂರ್ಖರನ್ನಾಗಿ ಮಾಡಬೇಡಿ ಎಂದಿದ್ದಾರೆ. ಮತ್ತೊಬ್ಬರು ನೀನು ಚೆನ್ನಾಗಿ ನಟನೆ ಮಾಡುತ್ತಿ. ಹೀಗೆ ಹಲವಾರು ಕಾಮೆಂಟ್ ಗಳನ್ನು ಮಾಡುವ ಮೂಲಕ ಚಾರ್ಲಿಯನ್ನು ಪುನೀತ್ ಅಭಿಮಾನಿಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು
Advertisement
ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ನಿನ್ನಂತೆ ಸಮಾಜ ಸೇವೆ ಮಾಡೋ ಶಕ್ತಿ ನನಗೆ ನೀಡು ಮಗನೇ: ರಾಘಣ್ಣ
ಅಪ್ಪು ಅಂತ್ಯಕ್ರಿಯೆಯ ಬಳಿಕ ಅವರ ಸಮಾಧಿ ವೀಕ್ಷಿಸಲು ಜನಸಾಗರವೇ ಹರಿಬರುತ್ತಿದೆ. ಪ್ರತಿನಿತ್ಯ ಬೇರೆ ಬೇರೆ ಜಿಲ್ಲೆ, ರಾಜ್ಯ ಹಾಗೂ ಗಣ್ಯರು ಕೂಡ ಸಮಾಧಿ ಸ್ಥಳಕ್ಕೆ ಆಗಮಿಸಿ ಕಣ್ಣೀರಿಡುತ್ತಾ ತೆರಳುತ್ತಿದ್ದಾರೆ. ಅಪ್ಪು ನಮ್ಮನ್ನಗಲಿ ನಿನ್ನೆಗೆ 11 ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಅಂತೆಯೇ 12ನೇ ದಿನವಾದ ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಅಪ್ಪು ಕುಟುಂಬಸ್ಥರು ಇಟ್ಟುಕೊಂಡಿದ್ದಾರೆ. ಇಂದು ಬೆಳಗ್ಗೆ 11.30ರಿಂದ ನಗರದ ಅರಮನೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.