ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕೋಮಲ್ ಹೆಸರು ಕೇಳಿಬರುತ್ತೀರುವ ಸ್ವೆಟರ್ ಹಗರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ನಟ ಕೋಮಲ್ ವಿರುದ್ಧ ಕೇಳಿ ಬರುತ್ತಿರುವ ಹಗರಣಕ್ಕೆ ಸಂಬಂಧಿಸಿದ ಸ್ಫೋಟಕ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. 1.72 ಕೋಟಿ ರೂ. ಸ್ವೆಟರ್ ಹಗರಣಕ್ಕೆ ತಿರುವು ಸಿಕ್ಕಿದ್ದು, ಹಂಚಿಕೆ ಹಗರಣ ಕೈ ಬಿಡುವಂತೆ ಒತ್ತಡ ಹೇರಲಾಗಿದೆ. ಆರೋಪ ಕೇಳಿ ಬಂದ ಬಳಿಕ ಸಂಧಾನ ಸಭೆ ನಡೆಸಲಾಗಿದೆ. ಬಿಬಿಎಂಪಿ ಶಿಕ್ಷಣ ಸಹಾಯಕ ಆಯುಕ್ತ ಹನುಮಂತಪ್ಪ ಸಂಧಾನದಲ್ಲಿ ಭಾಗಿಯಾಗಿದ್ದರು. ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಸಿಎಸ್ ರಘು ಜೊತೆ ಬಿಬಿಎಂಪಿ ದಲಿತ ನೌಕರರ ಸಂಘದ ಕಚೇರಿಯಲ್ಲಿ ಸಂಧಾನ ನಡೆಸಲಾಗಿದೆ. ಸಂಧಾನಕ್ಕೆ ಶಿಕ್ಷಣ ಸಹಾಯಕ ಆಯುಕ್ತ ಹನುಮಂತಪ್ಪ ಆಹ್ವಾನಿಸಿದ್ದರು.
Advertisement
Advertisement
ಸಹೋದರ ಕೋಮಲ್ ಪರ ನಟ ಜಗ್ಗೇಶ್ ಬೆದರಿಕೆಯನ್ನು ಹಾಕಿ ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಸ್ವೆಟರ್ ಟೆಂಡರ್‍ನಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಡವನ್ನು ಹೇರಿದ್ದರು. ನಟ ಜಗ್ಗೇಶ್, ನಟ ಕೋಮಲ್‍ರಿಂದ ರಾಜಕೀಯ ಒತ್ತಡ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಆರೋಪ ಕೇಳಿ ಬಂದಿದೆ.
Advertisement
Advertisement
ಕೋಮಲ್ ಅವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಜಗ್ಗೇಶ್ ಅವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಸಂಧಾನ ಸಭೆಯಲ್ಲಿ ನಡೆದಿರುವ ವೀಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ
2020-21 ಸಾಲಿನಲ್ಲಿ ಪಾಲಿಕೆ ಶಾಲೆಗಳಿಗೆ ಸ್ವೆಟರ್ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ತರಾತುರಿಯಲ್ಲಿ ಸ್ವೆಟರ್ ಪೂರೈಕೆ ಮಾಡ್ಬೇಕಾಗಿರೋದ್ರಿಂದ ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್‍ಗಳನ್ನು ಸರಬರಾಜು ಮಾಡಲು ಆದೇಶವೂ ಆಗಿತ್ತು. ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳಲಾಗಿದ್ದು, ಬಿಬಿಎಂಪಿಗೆ ನಟ ಕೋಮಲ್ ಸಹ ಸಾಥ್ ನೀಡಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಆರೋಪ ಮಾಡಿದೆ.