ನವಗ್ರಹ ಚಿತ್ರದಲ್ಲಿ ದರ್ಶನ್ (Darshan) ಜೊತೆ ಅಭಿನಯಿಸಿದ್ದ ನಟ ಗಿರಿ ದಿನೇಶ್ (Giri Dinesh) ಇಂದು (ಫೆ.7) ನಿಧನರಾಗಿದ್ದಾರೆ.
ಗಿರಿ ದಿವಂಗತ ನಟ ದಿನೇಶ್ (Actor Dinesh) ಅವರ ಪುತ್ರ. ನವಗ್ರಹ ಚಿತ್ರದಲ್ಲಿ 9 ಖಳನಟರ ಪುತ್ರರಲ್ಲಿ ಗಿರಿ ಕೂಡ ಒಬ್ಬರು. ಚಮ್ಕಾಯ್ಸು ಚಿಂದಿ ಉಡಾಯ್ಸು ಚಿತ್ರದಲ್ಲೂ ಅವರು ನಟಿಸಿದ್ದರು. ಅವರಿಗೆ ಹೆಚ್ಚಿನ ಸಿನಿಮಾ ಅವಕಾಶ ಸಿಕ್ಕಿರಲಿಲ್ಲ. ಇದನ್ನೂ ಓದಿ: ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರೆಂಟ್
ನವಗ್ರಹ ರೀರಿಲೀಸ್ ವೇಳೆ ಸಂಪರ್ಕ ಮಾಡಿದ್ದಾಗಲೂ ಕ್ಯಾಮೆರಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾಗಿ ಹೇಳಿಕೊಂಡಿದ್ದರಂತೆ.
ಸಂಜೆ ಮನೆಯಲ್ಲೇ ಅವರು ಅಸ್ವಸ್ಥರಾಗಿ ಕುಸಿದುಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ನಿಧನರಾಗಿದ್ದಾರೆ. ಅವರಿಗೆ ಮದುವೆಯಾಗಿರಲಿಲ್ಲ. ಅಣ್ಣನಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅನ್‌ಲಾಕ್ ರಾಘವನ ಬಗ್ಗೆ ರೆಚೆಲ್ ಡೇವಿಡ್ ಹೇಳಿದ್ದಿಷ್ಟು!