ಬೆಂಗಳೂರು: ಕನ್ನಡದ ನಾಯಕ ನಟ, ಕರಿ ಚಿರತೆ ಅಂತಲೇ ಫೇಮಸ್ ಆಗಿರೋ ನಟ ದುನಿಯಾ ವಿಜಯ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
43 ನೇ ವಸಂತ ಪೂರೈಸಿ ಇದೀಗ 44ನೇ ವಸಂತಕ್ಕೆ ಕಾಲಿರಿಸಿದ ಹೀರೋ ದುನಿಯಾ ವಿಜಯ್ ಗೆ ಎಲ್ಲರೂ ಶುಭಾಷಯ ಕೋರಿದ್ರು. ರಾತ್ರಿಯೇ ಹೊಸಕೆರೆ ಹಳ್ಳಿಯಲ್ಲಿ ಇರೋ ದುನಿಯಾ ವಿಜಿ ಮನೆ ಮುಂದೆ ನೂರಾರು ಅಭಿಮಾನಿಗಳು ಜಮಾಯಿಸಿದ್ರು.
Advertisement
ಅಭಿಮಾನಿಗಳ ಸಮ್ಮುಖದಲ್ಲೇ ವಿಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ್ರು. ದುನಿಯಾ ವಿಜಿ ಅಭಿಮಾನಿಗಳು ಘೋಷಣೆ ಕೂಗಿ ನೆಚ್ಚಿನ ನಟನಿಗೆ ಬರ್ತ್ ಡೇ ವಿಶ್ ತಿಳಿಸಿದ್ರು. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಅಂತ ದುನಿಯಾ ವಿಜಿ ಹೇಳಿದ್ರು.
Advertisement
Advertisement
ಜೀವನಚರಿತ್ರೆ: ವಿಜಯ್ ಅವರು ಜನವರಿ 20, 1974ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ರು. ಬಡಕುಟುಂಬದಲ್ಲಿ ಬೆಳೆದು ಬಂದಿರೋ ಇವರಿಗೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುವಾಸೆ ಹುಟ್ಟಿಕೊಂಡಿತ್ತು. ಹೀಗಾಗಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ರು. ಜೋಗಿ, ರಂಗ ಎಸ್ಎಸ್ಎಲ್ ಸಿ ಹೀಗೆ ಅನೇಕ ಚಿತ್ರಗಳಲ್ಲಿ ತನ್ನ ಚಿಕ್ಕ-ಚಿಕ್ಕ ಪಾತ್ರಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು.
Advertisement
2007ರಲ್ಲಿ ಸೂರಿ ಅವರ ನಿರ್ದೇಶನದಲ್ಲಿ ಮೂಡಿ ಬಂದ `ದುನಿಯಾ’ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸುವ ಅವಕಾಶ ದೊರೆಯಿತು. ಈ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಒಳ್ಳೆಯ ಸಿನಿಮಾವಾಗಿ ಮೂಡಿಬಂದಿತ್ತು. ಈ ಚಿತ್ರದ ಮೂಲಕ ವಿಜಯ್ ಅವರು ದುನಿಯಾ ವಿಜಯ್ ಆಗಿ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ನಂತರ ಇವರಿಗೆ ಅನೇಕ ಕನ್ನಡ ಚಿತ್ರಗಳು ನಾಯಕನಾಗಿ ಅಭಿನಯಿಸುವ ಅವಕಾಶಗಳು ಬಂದವು. ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಮಾಸ್ತಿಗುಡಿ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರ ರಂಗದಲ್ಲಿ ಸೈ ಎನಿಸಿಕೊಂಡರು.