ಮಡಿಕೇರಿ: ಈಶ ಫೌಂಡೇಶನ್ ಆಶ್ರಯದಲ್ಲಿ ‘ಕಾವೇರಿ ಕೂಗು’ ಅಭಿಯಾನದ ಆರಂಭಗೊಂಡಿದ್ದು, ಇಂದು ತಲಕಾವೇರಿಯಿಂದ ಶುರುವಾಗುವ ಬೈಕ್ ರ‍್ಯಾಲಿಗೆ ಫೌಂಡೇಶನ್‍ನ ಅಧ್ಯಕ್ಷ ಜಗ್ಗಿ ವಾಸುದೇವ್ ಚಾಲನೆ ನೀಡಿದರು.
ಇಂದಿನಿಂದ ಆರಂಭವಾಗಿರುವ ಕಾವೇರಿ ಕೂಗು ಬೈಕ್ ರ‍್ಯಾಲಿ 8ರಂದು ಬೆಂಗಳೂರು ತಲುಪಲಿದೆ. ಕೊಡಗಿನ ಕಾವೇರಿ ಉಗಮ ಸ್ಥಾನದಿಂದ ಸಂಚಾರ ಪ್ರಾರಂಭವಾಗಿ ಪೊಂಪು ಹಾರ್ ನಲ್ಲಿರುವ ತಿರುವರೂರ್ ಮೂಲಕ ಸಾಗಿ, ಚೆನ್ನೈನಲ್ಲಿ ಮುಕ್ತಾಯವಾಗಲಿದೆ. ರ‍್ಯಾಲಿ ಸಾಗುವ ಮಾರ್ಗಮಧ್ಯೆ ಕಾವೇರಿ ಕೂಗಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ.
Advertisement
Advertisement
ಕಾವೇರಿ ಕೂಗು ಬೈಕ್ ಜಾಥಾಕ್ಕೆ ಸ್ಯಾಂಡಲ್‍ವುಡ್ ನಟರಾದ ನಟ ದಿಗಂತ್ ಮತ್ತು ರಕ್ಷಿತ್ ಶೆಟ್ಟಿ ಸಾಥ್ ನೀಡಿದರು. ಈ ಬಗ್ಗೆ ಮಾತಾನಾಡಿದ ರಕ್ಷಿತ್ ಹಾಗೂ ದಿಗಂತ್, ಕಾವೇರಿ ಕೊಳ್ಳ ಪ್ರದೇಶದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಫಲವತ್ತತೆ ಕಡಿಮೆಯಾಗಿ ಭೂ ಕುಸಿತ, ಪ್ರವಾಹಗಳು ಸೃಷ್ಟಿ ಆಗುತ್ತಿವೆ. ಫಲವತ್ತತೆ ಹೆಚ್ಚಿಸಲು ಮರಗಳನ್ನು ನೆಡಬೇಕಾದ ಅಗತ್ಯವಿದೆ ಎಂದು ನಟ ದಿಗಂತ್ ತಲಕಾವೇರಿಯಲ್ಲಿ ಹೇಳಿದರು. ಅಲ್ಲದೆ ಕಾವೇರಿ ಕೊಳ್ಳಪ್ರದೇಶದಲ್ಲಿ 1 ಲಕ್ಷ ಗಿಡನೆಟ್ಟು ಬೆಳೆಸುತ್ತೇವೆ ನಟ ರಕ್ಷಿತ್ ಶೆಟ್ಟಿ ತಿಳಿಸಿದರು.
Advertisement
Advertisement
ಈ ಕಾವೇರಿ ಕೂಗು ಬಗ್ಗೆ ಮಾತಾನಾಡಿದ ಈಶ ಫೌಂಡೇಶನ್ ಅಧ್ಯಕ್ಷ ಜಗ್ಗಿ ವಾಸುದೇವ್, ಇಷ್ಟು ಮಳೆ ಬರುತ್ತಿದ್ದರೂ ದೇಶದಲ್ಲಿ ಕುಡಿಯಲು ನೀರಿಲ್ಲದಾಗಿದೆ. ನೂರು ವರ್ಷಗಳ ಹಿಂದೆ ಬರುತ್ತಿದ್ದ ಪ್ರಮಾಣದಲ್ಲೇ ಮಳೆ ಬರುತ್ತಿದೆ. ಇದಕ್ಕೆ ಕಾರಣ ಭೂಮಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಹೀಗಾಗಿಯೇ ಕೊಡಗಿನಲ್ಲಿ ಕಳೆದ ಬಾರಿ ಭೂ ಕುಸಿತ ಮತ್ತು ಪ್ರವಾಹ ಸೃಷ್ಟಿ ಆಯಿತು. ಸಹಜವಾಗಿ ಕಾಡು ಇರುವಲ್ಲಿ ಭೂ ಕುಸಿತವಾಗಿಲ್ಲ. ಬದಲಾಗಿ ನಾವು ಎಲ್ಲೆಲ್ಲಿ ಕೈ ಇಟ್ಟಿದ್ದೇವೊ ಅಲ್ಲಿ ಭೂಕುಸಿತವಾಗಿದೆ ಎಂದರು.
ಬಳಿಕ ಮಾತನಾಡಿದ ಅವರು, ಕಾವೇರಿ ಕೊಳ್ಳ ಪ್ರದೇಶದಲ್ಲಿ ಕಳೆದ 10 ವರ್ಷದಲ್ಲಿ 47 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ನದಿಯ ನೀರಿ ಸರಿಯಾಗಿ ಸಮುದ್ರ ಸೇರುತ್ತಿಲ್ಲ. ಸಮುದ್ರ ಸೇರುವ ಮೊದಲೇ ನೀರು ಬತ್ತು ಹೋಗುತ್ತಿದೆ. ಈ ಉದ್ದೇಶಕ್ಕಾಗಿಯೇ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ ಎಂದು ತಿಳಿಸಿದರು.
#CauveryCalling rolls from Talacauvery, the source of Cauvery. Spectacular downpour of monsoons out here. Riding soaked to the bone. -Sg https://t.co/m8vK14bmMt #FREEINDIAOfWaterCrisis pic.twitter.com/FUIJjZupH0
— Sadhguru (@SadhguruJV) September 3, 2019