ರಾಯಚೂರು: ನಟ ಧ್ರುವ ಸರ್ಜಾ ಅವರು ಇಂದು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದಾರೆ.
ಮಂತ್ರಾಲಯದಲ್ಲಿ ನಟ ರಾಯರ ವೃಂದಾವನ ದರ್ಶನ ಪಡೆದರು. ನಂತರ ಮಠದ ಪ್ರಾಂಗಣದಲ್ಲಿ ನಡೆದ ಹರಕೆ ರಥೋತ್ಸವದಲ್ಲಿ ಭಾಗಿಯಾಗಿ ರಥವನ್ನ ಎಳೆಯುವ ಮೂಲಕ ಹರಕೆಯನ್ನ ತೀರಿಸಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆಗೆ ನಿಂತ ಸೋನು ಸೂದ್
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಧ್ರುವ ಸರ್ಜಾಗೆ ಆಶೀರ್ವಚನ ನೀಡಿದರು. ಗುರುರಾಯರು ತಪಸ್ಸು ಮಾಡಿದ ಸ್ಥಳ ರಾಯಚೂರು ತಾಲೂಕಿನ ಗಾಣಧಾಳದ ಪಂಚಮುಖಿ ಆಂಜನೇಯ ದೇವಾಲಯಕ್ಕೂ ಭೇಟಿ ನೀಡಿ ಪಂಚಮುಖಿ ಆಂಜನೇಯ ದರ್ಶನವನ್ನು ಧ್ರುವ ಪಡೆದರು. ಇದನ್ನೂ ಓದಿ: ಅನೂಪ್ ಭಂಡಾರಿ ಜತೆ 3 ಸಿನಿಮಾ ಮಾಡ್ತಾರಾ ಸುದೀಪ್? : ಬರಲಿದೆ ವಿಕ್ರಾಂತ್ ರೋಣ 2