ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಕುಟುಂಬಸ್ಥರ ಜೊತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಚಾಮರಾಜಪೇಟೆ ಚಿತಾಗಾರದಲ್ಲಿ ನೆರವೇರಿದ ಸರಿಗಮ ವಿಜಿ ಅಂತ್ಯಕ್ರಿಯೆ
Advertisement
ಸಂಕ್ರಾಂತಿ ಹಬ್ಬದ ಸಂಭ್ರಮದಿಂದ ಆಚರಿಸಿದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಹಾಗೂ ಸ್ನೇಹಿತರ ಜೊತೆ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಭೇಟಿ ನೀಡಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ದೇವಸ್ಥಾನದಲ್ಲಿ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.
Advertisement
Advertisement
ಸದ್ಯ ದರ್ಶನ್ ಎಂದಿನಂತೆ ಈ ವರ್ಷವೂ ಕೂಡ ಜ.14ರಂದು ಸಂಕ್ರಾಂತಿ ಹಬ್ಬ ಸೆಲೆಬ್ರೇಟ್ ಮಾಡಿ ಸಂಭ್ರಮಿಸಿದ್ದಾರೆ. ಫಾರಂ ಹೌಸ್‌ನಲ್ಲಿ ಸಹೋದರ ದಿನಕರ್, ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೊತೆ ನಟ ಹಬ್ಬ ಆಚರಿಸಿದ್ದಾರೆ.