ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay), ಡಾಕ್ಟರ್ ಧನ್ಯತಾ ಅವರ ಜೊತೆ ಭಾನುವಾರ ಶುಭ ಮುಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೊಸಜೀವನಕ್ಕೆ ಕಾಲಿಟ್ಟ ನವಜೋಡಿಗೆ ಸಿನಿತಾರೆಯರು, ಗಣ್ಯರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದರು.
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿಯ ವಿವಾಹ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ 8:30ರಿಂದ 10 ಗಂಟೆ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಇದನ್ನೂ ಓದಿ: ಡಾಲಿ ಧನಂಜಯ್ ಕಲ್ಯಾಣ ವೈಭೋಗ
ಗೋಲ್ಡ್ ಕಲರ್ ಸೀರೆಯಲ್ಲಿ ಧನ್ಯತಾ ಮತ್ತು ಗೋಲ್ಡ್ ಕಲರ್ ಶೇರ್ವಾನಿಯಲ್ಲಿ ಧನಂಜಯ್ ಮಿಂಚಿದರು. ಧನ್ಯತಾ ಕುಟುಂಬದಿಂದ ಧಾರೆ ಶಾಸ್ತ್ರದ ಬಳಿಕ ಮಾಂಗಲ್ಯ ಧಾರಣೆ ನಡೆಯಿತು. ಡಾಲಿ ಮದುವೆಗೆ ಕುಟುಂಬಸ್ಥರು, ಮಠಾಧೀಶರು ಹಾಗೂ ಆಪ್ತರು ಸಾಕ್ಷಿಯಾದರು. ಜೋಡಿಗೆ ಅಕ್ಷತೆ ಹಾಕಿ ಹರಸಿದರು.
ಡಾಲಿ ಮದುವೆಯಲ್ಲಿ ನಟ ಶಿವರಾಜ್‌ಕುಮಾರ್, ನಟಿ ರಮ್ಯಾ ವಸಿಷ್ಠ ಸಿಂಹ, ಯುವರಾಜ್ ಕುಮಾರ್, ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ, ವಿನಯ್ ರಾಜ್, ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಸೇರಿದಂತೆ ಅನೇಕ ಸಿನಿಮಾ ತಾರೆಯರು ಪಾಲ್ಗೊಂಡು ಜೋಡಿಗೆ ವಿಶ್ ಮಾಡಿದರು. ಇದನ್ನೂ ಓದಿ: Dhananjay Wedding | ಡಾಲಿ ಆರತಕ್ಷತೆಯಲ್ಲಿ ಸೆಲೆಬ್ರಿಟಿಗಳ ದಂಡು – ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್
25ಕ್ಕೂ ಹೆಚ್ಚು ಬಗೆಯ ಸ್ಪೆಷಲ್ ಖಾದ್ಯ
ಧನಂಜಯ್ ಮತ್ತು ಧನ್ಯತಾ ಜೋಡಿ ಮದುವೆಗೆ ಆಗಮಿಸಿರುವ ಅತಿಥಿಗಳಿಗಾಗಿ 25 ಕ್ಕೂ ಹೆಚ್ಚು ಬಗೆ ಬಗೆಯ ವಿಶೇಷ ಖಾದ್ಯಗಳನ್ನು ಸಿದ್ಧತೆ ಮಾಡಲಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು, ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 800 ಬಾಣಸಿಗರಿಂದ ಅಡುಗೆ ತಯಾರಿಯಾಗಿದೆ.
ತಾಟಿಲಿಂಗು ಮಿಲ್ಕ್ ಶೇಕ್, ಆಮ್ ಪನ್ನ, ಜಾಕ್ ಫ್ರೂಟ್ ಪಾಯಸ, ಕಡ್ಲೆ ಉಸ್ಲಿ, ಫ್ರೂಟ್ ಕೋಸಂಬರಿ, ತೊಂಡೆಕಾಯಿ ಕ್ಯಾಷು ಪಲ್ಯ, ಪೈನಾಪಲ್ ಮದ್ದೂಲಿ, ಸುವರ್ಣ ಗೆಡ್ಡೆ ರವಾ ಫ್ರೈ, ಪನ್ನಿರ್ ಕುರ್ ಕುರೆ, ಅಕ್ಕಿ ರೊಟ್ಟಿ, ಇತಕಿದ ಬೆಳೆ ಕೂಟ್, ಪುದುಚ್ಚೆರಿ ಬಿರಿಯಾನಿ, ನುಗ್ಗೆಕಾಯಿ ಸಾಂಬಾರ್, ಉಡುಪಿ ತಿಳಿಸಾರು, ಸೌತೆಕಾಯಿ ರಸಂ, ಬೆಳೆ ಒಬ್ಬಟ್ಟು, 5 ರಿಂದ 6 ಬಗೆಯ ಸಿಹಿ ಖಾದ್ಯಗಳು ತಯಾರಾಗಿವೆ. ಇದನ್ನೂ ಓದಿ: ಮೈಸೂರು: ನಟ ಧನಂಜಯ್, ಡಾಕ್ಟರ್ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು