ಮಡಿಕೇರಿ: ಬಸವನಹಳ್ಳಿಯಲ್ಲಿ ಸರ್ಕಾರದ ವತಿಯಿಂದ ಆದಿವಾಸಿಗಳಿಗೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ನಟ ಚೇತನ್ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿರುವ ಬಸವನಹಳ್ಳಿಯಲ್ಲಿ ಆದಿವಾಸಿಗಳಿಗೆಂದೇ ನಿರ್ಮಾಣವಾಗುತ್ತಿರುವ ಮನೆಗಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟ ಮಾಡಿದ್ದಕ್ಕೆ ಪ್ರತಿಫಲ ದೊರೆಯುತ್ತಿದೆ. ಇದು ನನಗೆ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.
Advertisement
Advertisement
ಯಾವುದೇ ಸರ್ಕಾರ ಬಂದ್ರೂ ಕೇಳಿ ಪಡೆದುಕೊಳ್ಳಲು ಬಿಡಬಾರದು. ಕೇಳದೇ ಕೊಡುವ ಸರ್ಕಾರ ಮುಂದಿನ ದಿನಗಳಲ್ಲಿ ನಮಗೆ ಬೇಕು ಎಂದು ತಮ್ಮ ಅಭಿಪ್ರಾಯನ್ನು ಹಂಚಿಕೊಂಡರು. ಬಳಿಕ ಆದಿವಾಸಿಗಳ ಜೊತೆ ಕೆಲಕಾಲ ಬಸವನಹಳ್ಳಿಯಲ್ಲಿ ಕಾಲಕಳೆದ್ರು. ಇದನ್ನೂ ಓದಿ: ನಮ್ಮ ಅಧಿಕೃತ ಬಾವುಟ ಹಳದಿ, ಕೆಂಪು: ಸರ್ಕಾರ,ಸಾಹಿತಿಗಳ ವಿರುದ್ಧ ವಾಟಾಳ್ ಕಿಡಿ
Advertisement
Advertisement
ಆದಿವಾಸಿಗಳಿಗೆ ನ್ಯಾಯ ಸಿಗಬೇಕು ಅಂತ ಭಾರೀ ಹೋರಾಟದ ಬಳಿಕ ರಾಜ್ಯ ಸರ್ಕಾರ ಸರ್ಕಾರ ಸುಮಾರು 528 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಮುಂದಾಗಿದೆ. ಹೀಗಾಗಿ ಆದಿವಾಸಿಗಳಿಗೆ ಮನೆ ನಿರ್ಮಾಣವಾಗುತ್ತಿದೆ. ದಿಡ್ಡಳಿ ಹೋರಾಟ ನಡಸಿ ರಾಜ್ಯ ಸರ್ಕಾರ ಗಮನ ಸೆಳೆದ ಆದಿವಾಸಿಗಳು ಇಡೀ ಸರ್ಕಾರವನ್ನೇ ತಮ್ಮ ಬಳಿ ಬರುವಂತೆ ಉಗ್ರವಾಗಿ ಹೋರಾಟ ಮಾಡಿದ್ರು. ಈ ಹೋರಾಟದಲ್ಲಿ ಅನೇಕ ಹೋರಾಟಗಾರರು ಭಾಗಿಯಾಗಿದ್ದರು. ಆದಿವಾಸಿಗಳಿಗೆ ನ್ಯಾಯ ಸಿಗಬೇಕು. ಅವರಿಗೆ ಪುನರ್ ವಸತಿ ಲಭ್ಯವಾಗಬೇಕು ಎಂದು ಚೇತನ್ ಕೂಡ ಹೋರಾಟ ನಡೆಸಿದ್ದರು.