ಹಾಸನ: ಅಕ್ರಮ ಮರಳು ದಂಧೆ ಬಗ್ಗೆ ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಅನಿಲ್, ಶಿವಪ್ಪ, ಜಗದೀಶ್ ಎಂಬವರ ಮೇಲೆ ರೌಡಿಗಳು ಹಲ್ಲೆ ಮಾಡಿದ್ದು, ಅನಿಲ್ ಅವರ ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಅದು ಅಲ್ಲದೇ ಜಗದೀಶ್ ಅವರ ಮನೆಯಲ್ಲಿದ್ದ ತಾಯಿಯ ಬಟ್ಟೆಗಳನ್ನು ಹರಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಲ್ಲೆಗೊಳಗಾದವರು ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ
Advertisement
Advertisement
ಕಳೆದ ನಾಲ್ಕೈದು ತಿಂಗಳ ಹಿಂದೆ ಇದೇ ದೊಡ್ಡಿಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾನೆ ಎಂದು ಇದೇ ಗ್ರಾಮದ ಅನಿಲ್, ಸಾಗರ್ ಮತ್ತು ಜಗದೀಶ್ ಇನ್ನಿತರರು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Advertisement
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಅವರನ್ನು ಭೇಟಿ ಮಾಡಿ ನಮಗೆ ಜೀವಬೆದರಿಕೆ ಇದೆ, ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ದಿವಾಕರ್ ಹಾಗೂ ಆತನ ಸಹಚರರು, ಪುಡಿರೌಡಿಗಳನ್ನು ಕರೆಸಿ ನಮ್ಮ ಮನೆಯ ಕಿಟಕಿ ಗಾಜುಗಳು ಮತ್ತು ಕಾರನ್ನು ಒಡೆದು ಜಖಂಗೊಳಿಸಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ
ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.