ಯಾದಗಿರಿ: ಜಿಲ್ಲೆಯಲ್ಲಿ ಮರಳು ಮಾಫಿಯಾ ದಿನೇ ದಿನೇ ಹೆಚ್ಚಾಗುತ್ತಿದ್ದು, ದಂಧೆಕೋರರಿಗೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸುರಪುರ ತಾಲೂಕಿನ ಸುಗೂರು, ಮುಷ್ಟಹಳ್ಳಿ, ಹೆಮ್ಮಡಗಿ ಸೇರಿದಂತೆ ಮೊದಲಾದ ಕಡೆ ಕೃಷ್ಣಾ ನದಿ ಒಡಲಲ್ಲಿ ಅಕ್ರಮ ಮರಳು ದಂಧೆ ನಡೀತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ.ಇದನ್ನೂ ಓದಿ: ಕುರ್ಚಿ ಕಿತ್ತಾಟ – ದೆಹಲಿಯಲ್ಲಿ ಶಾಗೆ ಮಾಹಿತಿ ಕೊಟ್ಟ ವಿಜಯೇಂದ್ರ
ಹಾಡಹಗಲೇ ಅಕ್ರಮ ಮರಳು ಸಾಗಿಸುತ್ತಿದ್ದು, ದಂಧೆಕೋರರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಇನ್ನುಳಿದ ಅಧಿಕಾರಿಗಳು ಈ ದಂಧೆಗೆ ಕಡಿವಾಣ ಹಾಕದೇ ಮೌನಕ್ಕೆ ಜಾರಿದ್ದಾರೆ.
ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಿರಂತರವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ದಂಧೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಮುಖಂಡರೊಬ್ಬರು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಭಾರತದ ರಫೇಲ್ ನಷ್ಟವಾಗಿದೆ ಅನ್ನೋದು ಅಪ್ಪಟ ಸುಳ್ಳು – ಪಾಕ್ ವರದಿ ಅಲ್ಲಗಳೆದ ಫ್ರಾನ್ಸ್
