ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ನೆನಪಿಗೆ ವಿಜಯ್ ಅವರ ಗೆಳೆಯರ ಬಳಗ ಇಂದು ಬೆಂಗಳೂರಿನ ನಾಗರಭಾವಿ ಬಿ.ಡಿಎ ಕಾಂಪ್ಲೆಕ್ಸ್ ಬಳಿ ರಕ್ತದಾನ ಶಿಬಿರ ಆಯೋಜನೆ ಮಾಡಿದ್ದರು. ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಜಯ್ ಸ್ನೇಹಿತರು ವಿಶೇಷ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.
ವಿಜಯ್ ಅವರ ಹುಟ್ಟು ಹಬ್ಬದ ದಿನದಂದು ಇವತ್ತು ಅನೇಕ ಕಾರ‍್ಯಕ್ರಮಗಳನ್ನು ಆಯೋಜನೆ ಮಾಡಿದ್ದು ಅವರ ಹುಟ್ಟೂರಿನಲ್ಲಿ ಅವರ ಶಾಲೆಗೆ ಸುಣ್ಣಬಣ್ಣ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಚಾರಿ ಥಿಯೇಟರ್ ಕಡೆಯಿಂದ ನಾಟಕೋತ್ಸವ ಆಯೋಜನೆ ಮಾಡಲಾಗಿದೆ. ಅಲ್ಲದೇ ವಿಜಯ್ ಸಮಾಧಿ ಇರುವ ಪಂಚನಹಳ್ಳಿಯಲ್ಲೂ ಹಲವು ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
Live Tv
[brid partner=56869869 player=32851 video=960834 autoplay=true]