– ಸನಾತನ ಧರ್ಮ ಟೀಕಿಸುವವರು ಮಹಾ ಕುಂಭಮೇಳ ನೋಡಲಿ
ಲಕ್ನೋ: ಸನಾತನ ಧರ್ಮ (Sanatana Dharma) ಭಾರತದ ರಾಷ್ಟ್ರೀಯ ಧರ್ಮ. ಅದು ಮಾನವೀಯತೆಯ ಧರ್ಮ. ಇಲ್ಲಿ ಪೂಜಾ ಪ್ರಕ್ರಿಯೆ ವಿಭಿನ್ನವಾಗಿರಬಹುದು ಆದರೆ ಧರ್ಮ ಒಂದೇ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತಾಡಿದ್ದಾರೆ. ಈ ವೇಳೆ, ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಮಹಾ ಕುಂಭಮೇಳವು ಸನಾತನ ಧರ್ಮದ ಭಾಗವಾಗಿದೆ ಎಂದು ಹೇಳಿದ್ದಾರೆ.
ಮಹಾ ಕುಂಭಮೇಳ (Maha Kumbhmela), ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಬೃಹತ್ ಧಾರ್ಮಿಕ ಕಾರ್ಯಕ್ರಮವಾಗಿದೆ. ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಲ್ಲ. ಇದು ಎಲ್ಲಾ ಧರ್ಮ, ಸಂಸ್ಕೃತಿ ಮತ್ತು ಪಂಥದ ಮಹಾನ್ ಸಮ್ಮಿಲನವಾಗಿದೆ ಎಂದಿದ್ದಾರೆ.
ಈ ಏಕತೆಯ ಸಂದೇಶವನ್ನು ಮಹಾ ಕುಂಭದಿಂದ ನೀಡಲಾಗಿದೆ. ಇಲ್ಲಿ ಯಾವುದೇ ತಾರತಮ್ಯವಿಲ್ಲ. ಸನಾತನ ಧರ್ಮವನ್ನು ಟೀಕಿಸುತ್ತಿದ್ದ ಜನರು, ಇದನ್ನು ನೋಡಬೇಕು. ಸುಮ್ಮನೇ ಧೃತರಾಷ್ಟ್ರನಾಗಬೇಡಿ ಎಂದಿದ್ದಾರೆ.
ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುತ್ತವೆ. ಇದನ್ನು ದೇಶದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.