‘ಸನಮ್ ತೇರಿ ಕಸಮ್’ (Sanam Teri Kasam) ಸಿನಿಮಾ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟಿದ್ದ ಪಾಕ್ ನಟಿ ಮೌರಾ ಹೊಕಾನೆ (Mawra Hocane) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್
View this post on Instagram
Advertisement
ಫ್ಯಾನ್ಸ್‌ಗೆ ಮದುವೆ ಸುದ್ದಿ ತಿಳಿಸುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫೆ.5ರಂದು ಪಾಕಿಸ್ತಾನದ ಲಾಹೋರ್ ಪೋರ್ಟ್‌ನಲ್ಲಿ ಪಾಕಿಸ್ತಾನಿ ನಟ ಅಮೀರ್ ಗಿಲಾನಿ ಅವರೊಂದಿಗೆ ಮದುವೆಯಾಗಿದ್ದಾರೆ. ಗುರುಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆ (Wedding) ಜರುಗಿದೆ.
Advertisement
View this post on Instagram
Advertisement
ಇನ್ನೂ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಗೊಂದಲದ ಮಧ್ಯದಲ್ಲಿ ನಾನು ನಿನ್ನನ್ನು ಕಂಡುಕೊಂಡೆ ಎಂದು ನಟಿ ಬರೆದುಕೊಂಡಿದ್ದಾರೆ. ಇದೀಗ ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.