– ನಾಯಿ ಹುಡುಕಿಕೊಟ್ರೆ 5 ಲಕ್ಷ ರೂ. ಬಹುಮಾನ
ಸ್ಯಾನ್ ಫ್ರಾನ್ಸಿಸ್ಕೋ: ಕಳ್ಳತನವಾದ ನಾಯಿಯ ಹುಡುಕಾಟಕ್ಕೆ ಯುವತಿ ವಿಮಾನವನ್ನೇ ಬುಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಾಯಿಯನ್ನು ಹುಡುಕಿ ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಕೂಡ ಮಾಡಿದ್ದಾರೆ.
ಹೌದು, ಸ್ಯಾನ್ ಫ್ರಾನ್ಸಿಸ್ಕೋದ ಯುವತಿ ಎಮಿಲಿ ಟೆಲೆರ್ಮೊ ಅವರ 5 ವರ್ಷದ ಆಸ್ಟ್ರೇಲಿಯಾದ ಶೆಫರ್ಡ್ ಜಾಕ್ಸನ್ ಹೆಸರಿನ ನಾಯಿಯನ್ನು ಡಿಸೆಂಬರ್ 15 ರಂದು ಕಿರಾಣಿ ಅಂಗಡಿಯಿಂದ ಕಳವು ಮಾಡಲಾಗಿದೆ. ಈಗ ನಾಯಿಯ ಪತ್ತೆಗಾಗಿ ಎಮಿಲಿ ಗುರುವಾರ ವೆಬ್‍ಸೈಟ್ ಅನ್ನು ಪ್ರಾರಂಭಿಸಿದ್ದಾರೆ. ವೆಬ್‍ಸೈಟ್‍ನಲ್ಲಿ ನಾಯಿಯ ಫೋಟೋ ಹಾಗೂ ಅದಕ್ಕೆ ಸಂಬಂಧಿಸಿದ ಕೆಲವು ಮಾಹಿತಿ ಹಾಕಿದ್ದಾರೆ. ಈ ನಾಯಿಯನ್ನು ಹುಡುಕಿಕೊಟ್ಟರೆ 5 ಲಕ್ಷ ರೂ. ಬಹುಮಾನ ನೀಡಿವುದಾಗಿ ಎಮಿಲಿ ಭರವಸೆ ನೀಡಿದ್ದಾರೆ.
Advertisement
Advertisement
ನನ್ನ ನಾಯಿ (ಶೆಫರ್ಡ್ ಜಾಕ್ಸನ್) ಹುಡುಕಲು ನಾನು ಏನು ಬೇಕಾದರೂ ಮಾಡಲು ಸಿದ್ಧ. ಏಕೆಂದರೆ ಆ ನಾಯಿಯನ್ನು ತುಂಬಾ ಪ್ರೀತಿಸುತ್ತೇನೆ. ಶೆಫರ್ಡ್ ಜಾಕ್ಸನ್‍ನನ್ನು ಹುಡುಕಲು ನಾನು ವಿಮಾನವನ್ನು ಕಾಯ್ದಿರಿಸಿದ್ದೇನೆ ಎಂದು ಎಮಿಲಿ ಟೆಲೆರ್ಮೊ ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ವಿಮಾನದ ಮೂಲಕ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಓಕ್‍ಲ್ಯಾಂಡ್‍ನಲ್ಲಿ ಹುಡುಕಾಟ ನಡೆಸಲಾಗಿದೆ.
Advertisement
ನಾಯಿಯನ್ನು ಡಿಸೆಂಬರ್ 15ರಂದು ಕಟ್ಟಿಹಾಕಿದ್ದ ಕಿರಾಣಿ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ನಾಯಿಯ ಬಳಿ ಬಂದಿರುವುದು ಕಂಡುಬಂದಿದೆ. ನಾಯಿ ಕಳ್ಳತನವಾಗಿದ್ದು ಗಮನಕ್ಕೆ ಬರುತ್ತಿದ್ದಂತೆ ಕಳ್ಳನನ್ನು ಸ್ನೇಹಿತನೊಂದಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದೆ. ಆದರೆ ಕೈಗೆ ಸಿಗಲಿಲ್ಲ ಎಂದು ಎಮಿಲಿ ಹೇಳಿದ್ದಾರೆ.