ಬಾಲಿವುಡ್‌ನತ್ತ ‘ಗಾಳಿಪಟ 2’ ನಟಿ

Public TV
1 Min Read
samyuktha menon 1

ನ್ನಡದ ‘ಗಾಳಿಪಟ 2’ (Galipata 2) ನಟಿ ಸಂಯುಕ್ತಾ ಮೆನನ್ (Samyuktha Menon) ಸೌತ್ ಸಿನಿಮಾಗಳ ಮೂಲಕ ಸಿನಿ ಪ್ರಿಯರ ಮನಗೆದ್ದಿದ್ದಾರೆ. ಸದ್ಯ ಬಾಲಿವುಡ್‌ಗೆ ಆ್ಯಕ್ಷನ್ ಥ್ರಿಲರ್ ಚಿತ್ರದ ಮೂಲಕ ನಟಿ ಪಾದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಅಪ್ಪನ ಜೊತೆ ರಾಹಾ ಕ್ಯೂಟ್ ಪೋಸ್- ‘ಮುದ್ದು ರಾಜಕುಮಾರಿ’ ಎಂದ ಫ್ಯಾನ್ಸ್

samyuktha menon

ವಿರೂಪಾಕ್ಷ, ಡೆವಿಲ್ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿರುವ ಸಂಯುಕ್ತಾಗೆ ಬಿಗ್ ಚಾನ್ಸ್ ಸಿಕ್ಕಿದೆ. ಬಾಲಿವುಡ್‌ನ ‘ಮಹಾರಾಗ್ನಿ’ ಸಿನಿಮಾದಲ್ಲಿ ಸಂಯುಕ್ತಾ ಕೂಡ ಕಾಣಿಸಿಕೊಂಡಿದ್ದಾರೆ. ಕಾಜಲ್, ಪ್ರಭುದೇವ ಜೊತೆ ‘ಗಾಳಿಪಟ 2’ (Galipata 2) ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾ ಆಗಿದ್ರೂ ನಟಿಗೆ ನಟನೆಗೆ ಸ್ಕೋಪ್‌ ಇರುವ ಪಾತ್ರ ಸಿಕ್ಕಿದೆ ಎನ್ನಲಾಗಿದೆ. ಸೌತ್‌ನಲ್ಲಿ ಕ್ಲಿಕ್‌ ಆದಂತೆ ಬಾಲಿವುಡ್‌ನಲ್ಲಿಯೂ ನಟಿ ಗೆಲ್ತಾರಾ ಕಾಯಬೇಕಿದೆ.

‘ಮಹಾರಾಗ್ನಿ’ ಸಿನಿಮಾದ ಮೂಲಕ 27 ವರ್ಷಗಳ ನಂತರ ಕಾಜಲ್ ಮತ್ತು ಪ್ರಭುದೇವ ಒಂದಾಗಿದ್ದು, ಇಬ್ಬರೂ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ‘ಮಹಾರಾಗ್ನಿ’ ಸಿನಿಮಾ ಮೂಡಿ ಬಂದಿದೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.

Share This Article