ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ಫೋಟೋ, ವಿಡಿಯೋ ಹಾಕಿ ಸುದ್ದಿಯಾಗುವ ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆ ಮತ್ತೆ ಬಿಕಿನಿ ತೊಟ್ಟು ಮಿಂಚಿದ್ದು, ಚುಮು ಚುಮು ಚಳಿಯಲ್ಲಿ ಸ್ವಿಮ್ಮಿಂಗ್ ಪೂಲ್‍ನಿಂದ ಬ್ಲಕ್ ಬಿಕಿನಿ ತೊಟ್ಟು ಪೋಸ್ ನೀಡಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದೆಯೂ ಬಿಕಿನಿ ತೊಟ್ಟು ಪಡ್ಡೆ ಹುಡುಗದ ಮನಸೆಳೆದಿದ್ದ ಸಂಯುಕ್ತ ಹೆಗ್ಡೆ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ರು. ಆದರೆ ಮತ್ತೊಮ್ಮೆ ತಮ್ಮ ಬಿಕಿನಿ ಫೋಟೋ ಹಾಕುವ ಮೂಲಕ ಟಾಂಗ್ ನೀಡಿದ್ದಾರೆ. ಜನರು ನಿಮ್ಮನ್ನು ದ್ವೇಷಿಸಬಹುದು, ರೇಟ್ ಮಾಡಬಹುದು, ನಿಮ್ಮನ್ನು ಅಲುಗಾಡಿಸಲು ಬಹುದು. ಆದರೆ ನೀವು ಎಷ್ಟು ಗಟ್ಟಿಯಾಗಿ ನಿಂತು ಎದುರಿಸಿದ್ದೀರಾ ಎಂಬುವುದು ನಿಮ್ಮನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
Advertisement
https://www.instagram.com/p/BtQRdiwl7qG/
Advertisement
ನೀವು ತುಂಬಾ ಕಪ್ಪಗಿದ್ದಿರಾ? ಅಥವಾ ಫೇರ್ ಆಗಿದ್ದಿರಾ? ದಪ್ಪವಾಗಿದ್ದಿರಾ? ಸಣ್ಣಗಿದ್ದಿರಾ? ಎತ್ತವಾಗಿದ್ದಿರಾ? ಕುಳ್ಳರಾಗಿದ್ದೀರಾ? ಎಂಬುವುದನ್ನು ಬಿಡಿ. ನಮ್ಮಲ್ಲಿ ಯಾವಾಗಲೂ ಏನೋ ಒಂದು ಕೊರತೆ ಇರುತ್ತದೆ. ಆದ್ದರಿಂದ ಜಗತ್ತಿನ ಬಗ್ಗೆ ಕೇರ್ ಮಾಡುವುದನ್ನು ನಿಲ್ಲಿಸಿ. ಏಕೆಂದರೆ ನಿಮ್ಮ ಬಗ್ಗೆ ಜಗತ್ತು ಯೋಚಿಸುವುದಿಲ್ಲ. ನಿಮಗಾಗಿ ಜೀವಿಸಿ, ನಿಮ್ಮನ್ನು ನೀವು ಪ್ರೀತಿಸಿ ಎಂದು ಮತ್ತೊಂದು ಫೋಟೋದಲ್ಲಿ ಬರೆದುಕೊಂಡಿದ್ದಾರೆ.
Advertisement
ಸಂಯುಕ್ತ ಹೆಗ್ಡೆ ಸದ್ಯ ಎಂಟಿವಿಯ ‘ಸ್ಪ್ಲಿಟ್ಸ್ ವಿಲ್ಲಾ’ ಡೇಟಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ಇತರೇ ಸ್ಪರ್ಧಿಗಳಿಗೆ ಪೈಪೋಟಿ ನೀಡಿ ಮತ್ತೊಮ್ಮೆ ಕಿರಿಕ್ ಹುಡ್ಗಿ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ಕನ್ನಡ ಬಿಗ್‍ಬಾಸ್ 5ನೇ ಆವೃತ್ತಿಯಲ್ಲಿ ಸಂಯುಕ್ತಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮನೆಗೆ ಪ್ರವೇಶಿಸಿದ್ದರು. ಅಲ್ಲೂ ಕೂಡ ಪ್ರತಿ ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿ ಸುದ್ದಿಯಾಗಿದ್ದರು.
Advertisement
https://www.instagram.com/p/BtKrgw5lRnL/
https://www.instagram.com/p/BtInQCnF0uh/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv