ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಕಲಾವಿದರು ಕೂಡ ಆಯಾ ಪ್ರಯೋಗಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ (Samyuktha Hegde). ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ಸಂಯುಕ್ತ, ಸದ್ಯ ಕ್ರೀಮ್ (Kreem) ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಬೀದಿ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
Advertisement
ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ರೋಚಕ ಕ್ರೈಮ್ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕರು. ದಂಡುಪಾಳ್ಯದ ಹಿನ್ನೆಲೆಯ ಕಥೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ದಂಡುಪಾಳ್ಯ (Dandupalya) ಗ್ಯಾಂಗ್ ಬಗ್ಗೆ ಸಾಕಷ್ಟು ಕಥೆಗಳಿವೆ. ಈಗಾಗಲೇ ಮೂರು ಭಾಗಗಳಲ್ಲಿ ಅವರ ಕಥೆಯನ್ನು ಸಿನಿಮಾ ಮಾಡಲಾಗಿದೆ. ಅದೆಲ್ಲವೂ ಕಲ್ಪಿತ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರಂತೆ. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ
Advertisement
Advertisement
ಕ್ರೀಮ್ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದವರು ಅಗ್ನಿ ಶ್ರೀಧರ್. ಈ ಕುರಿತು ಅವರು ಮಾತನಾಡಿ, ದಂಡುಪಾಳ್ಯದವರು ಕೇವಲ ಕಳ್ಳತನ ಮಾಡಿದ್ದಾರೆ. ಅವರು ಎಂದೂ ಒಂಟಿ ಮಹಿಳೆಯನ್ನು ಬೆನ್ನತ್ತಿ ಕೊಂದಿಲ್ಲ. ಕೊಲೆ ಮಾಡಿದವರ ಹಿಂದೆ ಬೇರೆಯದ್ದೇ ಕಥೆಯಿದೆ. ಅದನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ’ ಎಂದಿದ್ದಾರೆ.
Advertisement
ವಿವಾದ ಆಗುವಂತಹ ಸಾಕಷ್ಟು ವಿಷಯಗಳು ಈ ಸಿನಿಮಾದಲ್ಲಿ ಇದೆ ಎನ್ನುವುದು ಶ್ರೀಧರ್ ಮಾತು. ಎಲ್ಲದಕ್ಕೂ ತಯಾರಿ ಮಾಡಿಕೊಂಡೆ ಈ ಕಥೆಯನ್ನು ಹೇಳಲು ಹೊರಟಿದೆಯಂತೆ ಚಿತ್ರತಂಡ. ಹಾಗಾಗಿ ಈವರೆಗೂ ಕೇಳಿದ ದಂಡುಪಾಳ್ಯದ ಕಥೆಯನ್ನು ಅಲ್ಲಗಳೆಯುವಂತಹ ಸಾಕಷ್ಟು ವಿಷಯಗಳು ಇಲ್ಲಿವೆಯಂತೆ.
ತಮ್ಮ ಪಾತ್ರದ ಕುರಿತು ಮಾತನಾಡಿರುವ ಸಂಯುಕ್ತಾ ಹೆಗ್ಢೆ. ಇಂಥದ್ದೊಂದು ಪಾತ್ರವನ್ನು ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಟೀಮ್ ಕೊಟ್ಟ ಸಹಕಾರ ದೊಡ್ಡದು. ಶ್ರೀಧರ್ ಅಂತವರು ಇದ್ದರೆ ಎಂತಹ ಪಾತ್ರ ಮಾಡುವುದಕ್ಕೂ ಧೈರ್ಯ ಬರುತ್ತದೆ ಎಂದರು. ಅಲ್ಲದೇ, ಪಾತ್ರದ ಗಟ್ಟಿತನದ ಕುರಿತು ಅವರು ಮಾತನಾಡಿದ್ದಾರೆ.