Connect with us

Cinema

ಏನಿದು ಸಂಯುಕ್ತಾ ಹೆಗ್ಡೆಯ ಕಿರಿಕ್? ಎಂಡ್ ಏನಾಯ್ತು? ನಿರ್ಮಾಪಕರು ಹೇಳಿದ್ದು ಏನು?

Published

on

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂಯುಕ್ತಾ ಹೆಗ್ಡೆ ತಮ್ಮ ಎರಡನೇ ಚಿತ್ರದಲ್ಲೇ ಕಿರಿಕ್ ಮಾಡಿಕೊಂಡಿದ್ದು, ಈಗ ಈ ವಿವಾದ ಸುಖಾಂತ್ಯವಾಗಿದೆ.

ಮೇ 1 ರಂದು ಸೆಟ್ಟೇರಿದ್ದ ‘ಕಾಲೇಜು ಕುಮಾರ್’ ಸಂಯುಕ್ತಾ ಅಭಿನಯದ ಎರಡನೇ ಚಿತ್ರ. ಮಂಗಳವಾರದಿಂದ ಚಿತ್ರೀಕರಣಕ್ಕೆ ಸಜ್ಜಾಗಿರುವ ಈ ಚಿತ್ರದಲ್ಲಿ ಸಂಯುಕ್ತಾ ಅಭಿನಯಿಸೋಕೆ ಒಲ್ಲೆ ಅಂದಿದ್ದಕ್ಕೆ ನಿರ್ಮಾಪಕ ಪದ್ಮನಾಭ್ ಫಿಲ್ಮ್ ಚೇಂಬರ್‍ಗೆ ದೂರು ನೀಡಿದ್ರು.

ಒಲ್ಲೆ ಅಂದಿದ್ದು ಯಾಕೆ?
ಡ್ಯಾನ್ಸರ್ ಕಮ್ ನಟಿ ಯಾಗಿರುವ ಸಂಯುಕ್ತಾ ಹೆಗ್ಡೆ ಅವರ ಪ್ರತಿಭೆ ಮೆಚ್ಚಿ ತಮಿಳಿನ ನಟ ಪ್ರಭುದೇವ ಅವರ ಚಿತ್ರವೊಂದರಿಂದ ಬುಲಾವ್ ಬಂದಿತ್ತು. ಹೀಗಾಗಿ ಸಂಯುಕ್ತಾ ಆ ಚಿತ್ರದಲ್ಲಿ ಅಭಿನಯಿಸೋದಕ್ಕಾಗಿ ಕಾಲೇಜ್ ಕುಮಾರ್ ಚಿತ್ರತಂಡಕ್ಕೆ ಡೇಟ್ಸ್  ಮುಂದೂಡುವಂತೆ ಕೇಳಿಕೊಂಡಿದ್ದರು.

ಕಿರಿಕ್ ಎಂಡ್:
ಫಿಲ್ಮ್ ಚೇಂಬರ್‍ಗೆ ದೂರು ನೀಡಿದ ನಂತರ ಫಿಲ್ಮ್ ಚೇಂಬರ್ ಮಧ್ಯಸ್ಥಿಕೆಯೊಂದಿಗೆ ನಟಿ ಮತ್ತು ಚಿತ್ರತಂಡದ ನಡುವಿನ ಭಿನ್ನಾಭಿಪ್ರಾಯ ಶಮನಗೊಂಡಿದ್ದು, ಈಗ ಸಂಯುಕ್ತಾ ಕಾಲೇಜ್ ಕುಮಾರ್ ಚಿತ್ರೀಕರಣದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಕಿರಿಕ್ ಜೋಡಿಯ ಮದುವೆಯ ಸುದ್ದಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ

ಅಲೆಮಾರಿ ಸಂತು ನಿರ್ದೇಶನದ, ಕೆಂಡಸಂಪಿಗೆ ವಿಕ್ಕಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಸಂಯುಕ್ತಾ ನಾಯಕಿಯಾಗಿ ಅಭಿನಯಿಸುವುದು ಫಿಕ್ಸ್ ಆಗಿತ್ತು. ಹೀಗಾಗಿ ತಾವಂದುಕೊಂಡ ಶೆಡ್ಯೂಲ್‍ನಲ್ಲಿ ನಾಯಕಿ ಒಪ್ಪದಿದ್ದ ಕಾರಣ ಈ ಭಿನ್ನಾಭಿಪ್ರಾಯ ಶುರುವಾಗಿತ್ತು. ಆದ್ರೆ ಈಗ ಸಂಯುಕ್ತಾ ಮನಬದಲಿಸಿ ಕನ್ನಡದ ಕಾಲೇಜ್ ಕುಮಾರ್ ಚಿತ್ರದಲ್ಲಿ ಅಭಿನಯಿಸೋದಕ್ಕೆ ಒಪ್ಪಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ನಿರ್ದೇಶಕ ಸಂತು, ನಿರ್ಮಾಪಕ ಪದ್ಮನಾಭ್ ಮಾತನಾಡಿದ್ದಾರೆ. ಫೇಸ್‍ಬುಕ್ ನಲ್ಲಿ ಸಂಯುಕ್ತ ಹೆಗ್ಡೆ ಈ ವಿಚಾರದ ಬಗ್ಗೆ ಸ್ಟೇಟಸ್ ಅಪ್‍ಡೇಟ್ ಮಾಡಿ ಕನ್ನಡ ನನ್ನ ಮಾತೃ ಭಾಷೆ, ಕನ್ನಡಕ್ಕೆ ನಾನು ಮೊದಲ ಆದ್ಯತೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

https://www.youtube.com/watch?v=wSz61TsRsNY

Click to comment

Leave a Reply

Your email address will not be published. Required fields are marked *