ಮೊದಲ ಗುರು ಕಳ್ಕೊಂಡ ನೋವಿನಲ್ಲಿ ಸಂಯುಕ್ತ

Public TV
1 Min Read
GIRISH 1

– ಕಾರ್ನಾಡ್ ಅವರೇ ನನಗೆ ಪ್ರೇರಣೆ – ಕಮಲ್ ಹಾಸನ್

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಸಿನಿಮಾರಂಗದವರು ಸಂತಾಪ ಸೂಚಿಸುತ್ತಿದ್ದಾರೆ.

ಗಿರೀಶ್ ಕಾರ್ನಾಡ್ ಅಗಲಿಕೆಗೆ ಬಹುಭಾಷಾ ನಟ ಕಮಲ್ ಹಾಸನ್ ಮತ್ತು ಸಂಯುಕ್ತ ಹೊರನಾಡು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸಂಯುಕ್ತ ಅವರು,” ನನ್ನ ಮೊದಲ ಸಿನಿಮಾ, ನಾಟಕ, ನಟನೆಯ ಕೋರ್ಸ್ ಮತ್ತು ಮೊದಲ ಗುರು ಗಿರೀಶ್ ಕಾರ್ನಾಡ್ ಅವರ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿದ್ದಾರೆ.

ಸಂಯುಕ್ತ ಅವರ ಸಿನಿಮಾ, ನಾಟಕ, ನಟನೆಯ ಕೋರ್ಸ್ ಎಲ್ಲದರನ್ನೂ ಗಿರೀಶ್ ಕಾರ್ನಾಡ್ ಜೊತೆಯಲ್ಲಿ ಇದ್ದರಂತೆ ಹೀಗಾಗಿ ಅವರೇ ಅವರ ಜೀವನದ ಮೊದಲ ಗುರು ಎಂದು ನೋವಿನಿಂದ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇನ್ನೂ ನಟ ಕಮಲ್ ಹಾಸನ್ ಕೂಡ, “ಶ್ರೀ ಗಿರೀಶ್ ಕಾರ್ನಾಡ್ ಅವರ ಬರಹಗಳು ವಿಸ್ಮಯವಾಗಿದ್ದು, ನನಗೆ ಸ್ಫೂರ್ತಿ ನೀಡಿವೆ. ಅವರ ಬರಹಗಳಿಂದ ಪ್ರೇರಣೆ ಪಡೆದ ಅನೇಕ ಅಭಿಮಾನಿಗಳನ್ನು ಇಂದು ತೊರೆದಿದ್ದಾರೆ. ಅವರ ಅಗಲಿಕೆಯಿಂದ ಬರಹಗಾರಿಗೆ ಅಪಾರ ನಷ್ಟವುಂಟುಮಾಡಿದೆ” ಎಂದು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.

ನಟ ಕಮಲ್ ಹಾಸನ್ ಮತ್ತು ಗಿರೀಶ್ ಕಾರ್ನಾಡ್ ‘ಹೇ ರಾಮ್’ ಮತ್ತು ‘ಗುಣ’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಗಿರೀಶ್ ಕಾರ್ನಾಡ್ ಅಗಲಿಕೆಗೆ ಸ್ಯಾಂಡಲ್‍ವುಡ್ ನಟ-ನಟಿಯರು ಮತ್ತು ರಾಜಕೀಯ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *