ಕಿರಿಕ್ ಪಾರ್ಟಿ (Kirik Party) ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಆಗಿರುವ ಸಂಯುಕ್ತ ಹೆಗ್ಡೆ (Samyukta Hegde) ಆನಂತರ ಹೇಳಿಕೊಳ್ಳುವಂತಹ ಅವಕಾಶಗಳು ಬಾರದೇ ಇದ್ದರೂ, ಸಿಕ್ಕಿರುವ ಅವಕಾಶವನ್ನೇ ಸದುಪಯೋಗ ಪಡಿಸಿಕೊಂಡು, ಜೀವನವನ್ನು ಜಾಲಿಯಾಗಿಟ್ಟಿದ್ದಾರೆ. ರಿಯಾಲಿಟಿ ಶೋ ಮೂಲಕ ಫೇಮಸ್ ಆದ ಸಂಯುಕ್ತ, ಕಿರಿಕ್ ಪಾರ್ಟಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದ ಇವರನ್ನು ಕಿರಿಕ್ ಹುಡುಗಿ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ.
Advertisement
ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಹಲವು ಸಿನಿಮಾಗಳನ್ನು ಮಾಡಿರುವ ಸಂಯುಕ್ತ, ಬಿಡುವು ಮಾಡಿಕೊಂಡು ಆಗಾಗ್ಗೆ ಪ್ರವಾಸಗಳನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅವರು ಥೈಲ್ಯಾಂಡ್ (Thailand) ಪ್ರವಾಸ ಕೈಗೊಂಡಿದ್ದು, ಆ ಪ್ರವಾಸದ ಅನುಭವಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಹಾಟ್ ಹಾಟ್ ಆಗಿರುವಂತಹ ಫೋಟೋಗಳನ್ನೂ ಅವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ
Advertisement
Advertisement
ಥೈಲ್ಯಾಂಡ್ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವ ಅವರು, ಸಮುದ್ರದ ನೂರು ಅಡಿ ಆಳಕ್ಕೆ ಇಳಿದು, ಅಲ್ಲಿನ ಸೌಂದರ್ಯವನ್ನು ಸವಿದಿದ್ದಾರೆ. ನನ್ನ ಜೀವನದಲ್ಲಿ ಇದು ಮರೆಯೋಕೆ ಆಗದೇ ಇರುವಂತಹ ಅನುಭವ ಎಂದು ಹಂಚಿಕೊಂಡಿದ್ದಾರೆ. ಆ ಅನುಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪದಗಳಿಂದ ವರ್ಣಿಸುವುದಕ್ಕೆ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
Advertisement
ಎರಡ್ಮೂರು ತಿಂಗಳ ಹಿಂದೆಯಷ್ಟೇ ಅವರು ಚಿತ್ರೀಕರಣದಲ್ಲಿ ಇದ್ದಾಗ ಕಾಲಿಗೆ ಏಟು ಮಾಡಿಕೊಂಡಿದ್ದರು. ಕೆಲ ತಿಂಗಳ ಕಾಲ ಮನೆಯಲ್ಲೇ ವಿಶ್ರಾಂತಿ ತಗೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರು. ಸಣ್ಣ ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿತ್ತು. ಕಾಲು ಸರಿಯಾಗಿ, ನಡೆದಾಡುವುದಕ್ಕೆ ಆಗುತ್ತಿದ್ದಂತೆಯೇ ಥೈಲ್ಯಾಂಡ್ ವಿಮಾನ ಏರಿದ್ದಾರೆ. ಇದೊಂದು ಸೋಲೋ ಟ್ರಿಪ್ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.